ಸೋಮವಾರ, ಆಗಸ್ಟ್ 8, 2022
24 °C

ಬಸವಣ್ಣನ ಪ್ರತಿಮೆಗೆ ಅಪಮಾನ: ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಬಾದ್: ಚಿತ್ತಾಪೂರ ಪಟ್ಟಣದಲ್ಲಿ ಬಸವೇಶ್ವರ ಪ್ರತಿಮೆಗೆ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹಳೆಶಹಾಬಾದನ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ವಿಶ್ವಹಿಂದು ಪರಿಷತ್ ವತಿಯಿಂದ ಸೋಮವಾರ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭೀಮರಾವ ಸಾಳುಂಕೆ, ಸಮಾನತೆಯ ಹರಿಕಾರ ಬಸವಣ್ಣನವರ ಮೂರ್ತಿಯನ್ನು ಅವಮಾನಿಸಿದ್ದರಿಂದ ಬಸವ ಅನುಯಾಯಿಗಳಿಗೆ ತೀವ್ರ ನೋವಾಗಿದೆ. ಕೂಡಲೇ ಭಗ್ನಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮಹಾಪುರುಷರ ಪುತ್ಥಳಿಗಳಿಗೆ ಈ ರೀತಿಯ ಘಟನೆಯಾಗದಂತೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಗಿರಿಮಲ್ಲಪ್ಪ ವಳಸಂಗ ಮಾತನಾಡಿ, ಇಡೀ ಮನುಕುಲಕ್ಕೆ ಸಮಾನತೆಯ ತತ್ವವನ್ನು ಸಾರಿದ ವಿಶ್ವಗುರು ಬಸವಣ್ಣವರ ಮೂರ್ತಿಗೆ ಅವಮಾನಿಸುವ ಘಟನೆ ಇಡೀ ಮನುಕುಲಕ್ಕೆ ಮಾಡಿದ ಅವಮಾನವಾಗಿದೆ. ದೇಶವಲ್ಲದೇ ಹೊರ ದೇಶದಲ್ಲಿ ಕೂಡ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅವರ ಚಿಂತನೆಗಳಿಗೆ ತಲೆ ಬಾಗುತ್ತಿದ್ದಾರೆ.ಆದರೆ ಅಂತಹ ಪುಣ್ಯಾತ್ಮರ ನಡೆದಾಡಿದ ನಾಡಲ್ಲಿ ಅವರ ಮೂರ್ತಿಗೆ ಅವಮಾನ ಮಾಡಿದ್ದು ಅತ್ಯಂತ ಖಂಡನೀಯವಾದುದು. ರಾಜ್ಯದಲ್ಲಿ ಮೇಲಿಂದ ಮೇಲೆ ಮಹಾನ್ ನಾಯಕರ ಮೂರ್ತಿಗಳಿಗೆ ಅವಮಾನಿಸುವ ಘಟನೆ ಪ್ರಕರಣಗಳು ಹೆಚ್ಚುತ್ತಿವೆ.ಇದರಿಂದ ರಾಜ್ಯದಲ್ಲಿ ಅಶಾಂತಿ ಸೃಷ್ಠಿಸುವ ಹುನ್ನಾರ ನಡೆಯುತ್ತಿದೆ.ಆದ್ದರಿಂದ ಕೂಡಲೇ ಅವಮಾನ ಮಾಡಿದ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಯಿಸಿದರು.

ಬಸವರಾಜ ಮದ್ರಕಿ, ಕನಕಪ್ಪ ದಂಡಗುಲಕರ ಮಾತನಾಡಿ, ರಾಜ್ಯದಲ್ಲಿರುವ ಬಸವೇಶ್ವರರ ಪ್ರತಿಮೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಈ ಘಟನೆಯಿಂದ ವೀರಶೈವ ಲಿಂಗಾಯತ ಸಮಾಜದ ಬಂಧುಗಳ ಹಾಗೂ ಬಸವ ಅಭಿಮಾನಿಗಳ ಮನಸ್ಸಿಗೆ ಆಘಾತವಾಗಿದೆ. ಅಪರಾಧಿಗಳನ್ನು ತಕ್ಷಣ ಬಂಧಿಸಿ ತನಿಖೆಗೆ ಒಳಪಡಿಸಬೇಕು. ಒಂದು ವೇಳೆ ನಿರ್ಲಕ್ಷ ವಹಿಸಿದಲ್ಲಿ ಕರ್ನಾಟಕ ರಾಜ್ಯಾದ್ಯಂತ ಮತ್ತೆ ಪ್ರತಿಭಟನೆ ನಡೆಸಿ ಮತ್ತು ರಸ್ತೆ ತಡೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಳೆಶಹಾಬಾದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ, ಶ್ರೀಶೈಲಪ್ಪ ಬೆಳಮಗಿ, ಸಂತೋಷ ಪಾಟೀಲ, ಶರಣಗೌಡ ಪಾಟೀಲ, ಶರಣಪ್ಪ ಕೊಡದೂರ,ಶರಣು ಕೌಲಗಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ,ಶರಣಬಸಪ್ಪ ಕೋಬಾಳ, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ತರನಳ್ಳಿ, ಕುಪೇಂದ್ರ ತುಪ್ಪದ್,ಚನ್ನಪ್ಪ ಸಿನ್ನೂರ್, ಕಾಶಿನಾಥ ಸಿಂಪಿ ಇದ್ದರು.

ವಿಶ್ವಹಿಂದು ಪರಿಷತ್‍ನ ಅಧ್ಯಕ್ಷ ಬಸವರಾಜ ಸಾತ್ಯಾಳ, ಪ್ರಮುಖರಾದ ಅನೀಲ ಹಿಬಾರೆ, ಮಲ್ಲಿಕಾರ್ಜುನ ವಾಲಿ, ಸುಭಾಷ ಜಾಪುರ, ಈರಣ್ಣ ಪ್ಯಾರಸಬಾದಿ, ಬಸವರಾಜ ಬಿರಾದಾರ, ದೀನೇಶ ಗೌಳಿ, ರಾಮು ಕುಸಾಳೆ, ಬಸವರಾಜ ಮದ್ರಿಕಿ, ಸಚಿನ್ ಹಂಚಾಟೆ, ಸಂಜೀವ ವಿಟಕರ, ಮಹಾದೇವ ಗೋಬ್ಬೂರಕರ, ನಿಂಗಣ್ಣ ಹುಳಗೋಳಕರ, ಸದಾನಂದ ಕುಂಬಾರ, ಶರಣು ವಸ್ತ್ರದ, ದುರ್ಗಪ್ಪ ಪವಾರ, ಶ್ರೀನೀವಾಸ ದೇವಕರ,ನರಸಿಂಹಲು ರಾಯಚೂರ,ಯಲ್ಲಪ್ಪ ದಂಡಗುಲಕರ, ಅಮರ ಕೋರೆ, ಯಲ್ಲಪ್ಪ ಜಾಲಳ್ಳಿ, ರಜನಿಕಾಂತ್ ಸೂರ್ಯವಂಸಿ, ಸೋಮಶೇಖರ್ ಅಣಬಿ, ಸುರೇಂದ್ರ, ಚೇತನ, ಮಹೇಶ್ ಪ್ಯಾರಸಬಾದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.