ಅಫಜಲಪುರ: ‘ನಮ್ಮ ಮತಕ್ಷೇತ್ರದಲ್ಲಿ ಕಳೆದ ಒಂದು ವಾರದಲ್ಲಿ ಮಳೆ ಹಾಗೂ ಬಿರುಗಾಳಿಗೆ ಸಾಕಷ್ಟು ಬಾಳೆಯ ಗಿಡಗಳು ನೆಲಕ್ಕೆ ಉರಳಿವೆ. ಬೆಳೆ ಹಾನಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಶಾಸಕರ ಮೂಲಕ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ಪಾಟೀಲ ತಿಳಿಸಿದರು.

ತಾಲ್ಲೂಕಿನ ಚಿಂಚೋಳಿ ಗ್ರಾಮದ ರೈತ ಗುರುಶಾಂತಪ್ಪ ಅಡಕಿ, ಬಳೂರ್ಗಿ ಗ್ರಾಮದ ರೈತ ಸೈಯದ್ ಹಜರತ್ ಪಟೇಲ್ ಅವರ ಬಾಳೆ ತೋಟಗಳಿಗೆ ಈಚೆಗೆ ಭೇಟಿ ನೀಡಿ ಬಳಿಕ ‘ಪ್ರಜಾವಾಣಿ’ ಜೊತೆಗೆ ಮಾತನಾಡಿದರು.

‘ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಳೆದ 2–3 ದಿನಗಳಿಂದ ಬಿರುಗಾಳಿಗೆ ಹಾಳಾಗಿರುವ ಬಾಳೆ ಬೆಳೆ ಸಮೀಕ್ಷೆ ಮಾಡುತ್ತಿದ್ದು, ಬಳಿಕ ನಿಖರ ಮಾಹಿತಿ ತಿಳಿಯುತ್ತದೆ. ಆದಷ್ಟು ಬೇಗ ಸರ್ಕಾರ ಪರಿಹಾರ ನೀಡಬೇಕು. ಅಧಿಕಾರಿಗಳು ಖುದ್ದಾಗಿ ಜಮೀನಿಗೆ ಭೇಟಿ ನೀಡಿ ಪ್ರಮಾಣಿಕವಾಗಿ ಸಮೀಕ್ಷೆ ಮಾಡಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್ ಸಂಜುಕುಮಾರ್ ದಾಸರ್, ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಸಿದ್ದರಾಮ ಅಳ್ಳೋಳಿ, ಗ್ರಾಮ ಲೆಕ್ಕಾಧಿಕಾರಿ ಸಿದ್ದು ಹಲ್ದೂರ, ಮುಖಂಡರಾದ ಸಿದ್ಧಾರ್ಥ ಬಸರಿಗಿಡದಮ ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಣವೀರ ಮಠಪತಿ, ರೈತ ಮುಖಂಡರಾದ ಹಜರತ್ ಪಟೇಲ್, ಗುಲಾಬ್ ಸಿಂಗ್ ರಾಠೋಡ್, ಶೀಮಂತ ಜಾಧವ ಇತರರು ಇದ್ದರು.

ಬಳ್ಳೂರಗಿ ಗ್ರಾಮದಲ್ಲಿ 20 ರೈತರ ಸುಮಾರು 100 ಎಕರೆ ಜಮೀನಿನಲ್ಲಿ ಕಳೆದ ವರ್ಷ ನಾಟಿ ಮಾಡಿದ ಬಾಳೆ ಹಾಳಾಗಿದೆ ಎಂದು ಬೆಳೆಗಾರರಾದ ಸೈಯದ್ ಹಜರತ್ ಪಟೇಲ್, ಭಿಲ್ಲು ಶಂಕರ್ ರಾಥೋಡ್, ನಾಮದೇವ್ ತಾವರು ಚವ್ಹಾಣ, ಮುತ್ತವ್ವ ಭೀಮಣ್ಣ ಪೂಜಾರಿ, ತಿಪ್ಪಣ್ಣ ಚಲಗೇರಿ, ಬಸಣ್ಣ ಹೌದೆ, ಶಾಬಿದ್ದೀನ್ ಶೇಖ್ ಅವರು ಅರುಣಕುಮಾರ ಪಾಟೀಲ ಹಾಗೂ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-31-1780222901

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.