ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ವಂಚಿತ ಶಾಲೆ: ಪರದಾಟ

ವಿದ್ಯಾರ್ಥಿಗಳ ಸ್ಥಳಾಂತರ ಮಾಡಿ ಸೌಲಭ್ಯ ನೀಡದ ಇಲಾಖೆ
Last Updated 17 ಜನವರಿ 2023, 2:36 IST
ಅಕ್ಷರ ಗಾತ್ರ

ವಾಡಿ: ಕರದಾಳ ಗ್ರಾಮದ ಹೊರ ವಲಯದಲ್ಲಿ ನಿರ್ಮಿಸಿರುವ ವಸತಿ ನಿಲಯಗಳ ಸಂಕೀರ್ಣ ಗಮನ ಸೆಳೆಯುತ್ತಿದೆ. ನೂರಾರು ಬಡ ಮಕ್ಕಳ ಶೈಕ್ಷಣಿಕ ಬದುಕಿಗೆ ಇದು ಆಸರೆಯಾಗಿದೆ. ಇಲ್ಲಿ ಇಂದಿರಾಗಾಂಧಿ ಹಾಗೂ ಅಂಬೇಡ್ಕರ್ ವಸತಿ ಶಾಲೆಗಳು ನಡೆಯುತ್ತಿವೆ. ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 250 ಹಾಗೂ ಅಂಬೇಡ್ಕರ್ ವಸತಿ ಶಾಲೆಯ 195 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ನಡೆಯುತ್ತಿರುವ ಇಂದಿರಾ ಗಾಂಧಿ ವಸತಿ ಶಾಲೆಯು ವಾಡಿ ಪಟ್ಟಣದಿಂದ ಕಳೆದ ಆಗಷ್ಟ್ ತಿಂಗಳಲ್ಲಿ ಇಲ್ಲಿಗೆ ಸ್ಥಳಾಂತಗೊಂಡಿದೆ. ಆದರೆ ಸ್ಥಳಾಂತರಗೊಂಡು 5 ತಿಂಗಳು ಕಳೆದ ರೂ ಇಲಾಖೆಯು ವಿದ್ಯಾರ್ಥಿಗಳಿಗೆ ಅವಶ್ಯಕವಾದ ಮೂಲಸೌಕರ್ಯ ಒದಗಿಸಿಲ್ಲ. ನಾನಾ ಸಮಸ್ಯೆಗಳ ಮಧ್ಯೆ ಮಕ್ಕಳ ಕಲಿಕೆ ನಡೆದಿದೆ.
ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಕಲ ಸೌಲಭ್ಯಗಳು ಇವೆ. ಆದರೆ ಇಂದಿರಾಗಾಂಧಿ ವಸತಿ ಶಾಲೆಯ ಮಕ್ಕಳು ಮಾತ್ರ ಕನಿಷ್ಠ ಸೌಕರ್ಯಗಳಿಲ್ಲದೇ ಪರದಾಡುತ್ತಿದ್ದಾರೆ.

ಇಂದಿರಾಗಾಂಧಿ ವಸತಿ ಶಾಲೆಗೆ ನೀಡಿರುವ ನೀರು ಬಿಸಿ ಮಾಡುವ ಯಂತ್ರ ಆರಂಭದಿಂದಲೂ ಕೆಟ್ಟು ನಿಂತಿದ್ದು, ಥರಗುಟ್ಟುವ ಚಳಿಯಲ್ಲಿಯೂ ವಿದ್ಯಾರ್ಥಿಗಳು ನಡುಗುತ್ತಾ ತಣ್ಣೀರು ಸ್ನಾನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅತ್ಯಗತ್ಯವಾದ ಹಾಸಿಗೆ, ದಿಂಬು, ಬೆಡ್, ಸೊಳ್ಳೆಪರದೆ, ಸ್ವೆಟರ್ ಒದಗಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸಮಸ್ಯೆಗಳ ಮಧ್ಯೆ ಹೊಂದಾಣಿಕೆ ಮಾಡಿಕೊಂಡು ಅಭ್ಯಾಸ ಮಾಡುವುದು ಅನಿವಾರ್ಯವಾಗಿದೆ.

ವಿದ್ಯುತ್ ಕೈಕೊಟ್ಟಾಗ ಪರ್ಯಾಯವಾಗಿ ಯುಪಿಎಸ್ ಹಾಗೂ ಸೋಲಾರ್ ವ್ಯವಸ್ಥೆ ಕಲ್ಪಿಸದ ಕಾರಣ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಗ್ರಂಥಾಲಯಕ್ಕೆ ಬೆಂಚು ಹಾಗೂ ಪುಸ್ತಕಗಳ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಪಾಠಕ್ಕೆ ಪೂರಕ ಮಾಹಿತಿ ಸಿಗದೇ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

ನೀರು ಶುದ್ದೀಕರಣ ಘಟಕ ಇಲ್ಲದ ಕಾರಣ ಫ್ಲೋರೈಡ್ ಅಂಶವುಳ್ಳ ನೀ ರು ಸೇವಿಸುತ್ತಿದ್ದು ಅನಾರೋಗ್ಯ ಭೀತಿ ತಲೆದೋರಿದೆ. ವಿದ್ಯಾರ್ಥಿಗಳು ಡೆಸ್ಕ್‌ ಗಳು ಇಲ್ಲದ ಕಾರಣ ನೆಲದ ಮೇಲೆ ಕುಳಿತು ಪಾಠ ಪ್ರವಚನ ಕೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT