ಕೆಂಭಾವಿ: ‘ಮಕ್ಕಳಿಗೆ ಜವಾಬ್ದಾರಿಯನ್ನು ಕಲಿಸಲು ‘ಆದರ್ಶ ಜ್ಞಾನ ಮಂಥನ’ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಶಿಕ್ಷಣ ಎಂದರೆ ಕೇವಲ ಅಂಕಗಳಿಕೆಯಲ್ಲ, ಅದು ವ್ಯಕ್ತಿತ್ವ ವಿಕಸನ ಎಂಬುದನ್ನು ಈ ಜ್ಞಾನ ಸಾಬೀತುಪಡಿಸಿದೆ’ ಎಂದು ಯಕ್ತಾಪುರ ಸಿಆರ್ಪಿ ರಮೇಶ ವಣಿಕ್ಯಾಳ ಶಾಲೆಯ ಸೃಜನಶೀಲ ಪ್ರಯತ್ನವನ್ನು ಶ್ಲಾಘಿಸಿದರು.

‘ಇಲ್ಲಿನ ಐನಾಪುರದ ಆದರ್ಶ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಆದರ್ಶ ಜ್ಞಾನ ಮಂಥನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ದಿನದ ಶಿಕ್ಷಕರಾಗಿ ವಿದ್ಯಾರ್ಥಿಗಳು: ಒಂದು ದಿನ ಶಿಕ್ಷಕರಾಗಿ ಶಿಕ್ಷಣದ ಮೌಲ್ಯ ತಿಳಿಯೋಣ ಎಂಬುದು ಈ ಕಾರ್ಯಕ್ರಮದ ಮೂಲ ಉದ್ದೇಶ. ಶಿಕ್ಷಕರ ಜವಾಬ್ದಾರಿ, ಬೋಧನೆಯಲ್ಲಿರುವ ಸವಾಲುಗಳು ಹಾಗೂ ಅವರು ಪಡುವ ಶ್ರಮವನ್ನು ವಿದ್ಯಾರ್ಥಿಗಳು ಸ್ವತಃ ಅನುಭವಿಸಿ ತಿಳಿಯಲಿ ಎಂಬ ಕಾರಣಕ್ಕೆ ಈ ವಿನೂತನ ಪ್ರಯೋಗ ಕೈಗೊಳ್ಳಲಾಗಿತ್ತು.

ವಿದ್ಯಾರ್ಥಿಗಳು ಕೇವಲ ಶಿಕ್ಷಕರ ವೇಷ ಧರಿಸುವುದಕ್ಕೆ ಸೀಮಿತವಾಗದೆ, ಸಮಾಜಕ್ಕೆ ಅಗತ್ಯವಿರುವ ಪ್ರಮುಖ ವಿಷಯಗಳ ಬಗ್ಗೆ ಪಾಲಕರು ಹಾಗೂ ಸಹಪಾಠಿಗಳ ಮುಂದೆ ಅತ್ಯಂತ ಪರಿಣಾಮಕಾರಿಯಾಗಿ ಪಾಠ ಮಾಡಿದರು. ತಮ್ಮ ಮಕ್ಕಳು ವೇದಿಕೆಯ ಮೇಲೆ ಶಿಕ್ಷಕರಂತೆ ನಿಂತು ಗಂಭೀರವಾಗಿ ವಿಷಯಗಳನ್ನು ಮಂಡಿಸುತ್ತಿರುವುದನ್ನು ಕಂಡು ಪಾಲಕರು ಸಂತಸ ವ್ಯಕ್ತಪಡಿಸಿದರು.

ಸಾನ್ನಿಧ್ಯವನ್ನು ಶಾಂತಯ್ಯ ಸ್ವಾಮೀಜಿ ಹಾಗೂ ಜಗದಂಡಯ್ಯ ಸ್ವಾಮೀಜಿ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಿವನಗೌಡ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಾಪುಗೌಡ ದೊಡ್ಡಮನಿ, ನೀಲಕಂಠರಾಯಗೌಡ ಪಾಟೀಲ, ಶಾಂತಗೌಡ ಸಾಲವಡಗಿ, ಎಸ್.ಎಸ್.ಪಾಟೀಲ, ಮಧುಗೌಡ ಜಲಪುರ, ಇಲಿಯಾಸ್ ಪಟೇಲ್ ಬಳಗಾನೂರ ಪಾಲ್ಗೊಂಡಿದ್ದರು.

ಶಾಲೆಯ ಮುಖ್ಯಗುರುಗಳಾದ ಸಂಜು ದೊಡ್ಡಮನಿ, ವಿದ್ಯಾ ದೊಡ್ಡಮನಿ ಸೇರಿದಂತೆ ಶಿಕ್ಷಕ ವೃಂದ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.