ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿ ನಡೆಸದೇ ಪರೀಕ್ಷೆ: ವಿದ್ಯಾರ್ಥಿಗಳ ಪ್ರತಿಭಟನೆ

ಪರೀಕ್ಷಾ ವೇಳಾಪಟ್ಟಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ ವಿರೋಧ
Last Updated 25 ಸೆಪ್ಟೆಂಬರ್ 2020, 16:01 IST
ಅಕ್ಷರ ಗಾತ್ರ

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದುವರಿಸಬೇಕು, ವಸತಿಗೃಹ ಕಲ್ಪಿಸಬೇಕು ಹಾಗೂ ಗ್ರಾಂಥಾಲಯದಲ್ಲಿ ಪ್ರವೇಶ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ವಿ.ವಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ವಿಶ್ವವಿದ್ಯಾಲಯದಲ್ಲಿ ಯಾವುದೇ ತರಗತಿಗಳನ್ನು ನಡೆಸದೇ ನೇರವಾಗಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ. ಕೊರೊನಾ ವೈರಾಣು ಹರಡುವ ಭಯದಲ್ಲಿ ಯಾವುದೇ ತರಗತಿಗಳು ನಡೆದಿಲ್ಲ. ಆನ್‌ಲೈನ್‌ ತರಗತಿಗಳನ್ನೂ ನಿಯಮವಾಗಿ ನಡೆಸಿಲ್ಲ. ಇದೆಲ್ಲವನ್ನು ಪರಿಗಣಿಸಿ, ಕುಲಪತಿಗಳು ವಿದ್ಯಾರ್ಥಿಗಳ ಪರಿಸ್ಥಿತಿ ಅರಿತು ವೇಳಾಪಟ್ಟಿ ಬಿಡುಗಡೆ ಮಾಡಬೇಕಿತ್ತು ಎಂದು ಪ್ರತಿಭಟನಾಕಾರರು ದೂರಿದರು.

‘ಈ ಅವ್ಯವಸ್ಥೆ ಬಗ್ಗೆ ಕುಲಪತಿಗಿಗೆ ಈ ಹಿಂದೆ ಸಾಕಷ್ಟು ಪತ್ರ ಬರೆದಿದ್ದೇವೆ, ಮನವಿ ನೀಡಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದೆಡೆ ಪುಸ್ತಕವಿಲ್ಲ, ಹಾಸ್ಟೆಲ್‌ ವ್ಯವಸ್ಥೆ ಇಲ್ಲ, ತರಗತಿಗಳೂ ನಡೆದಿಲ್ಲ. ಹಾಗಿದ್ದ ಮೇಲೆ ಪರೀಕ್ಷೆ ಎದುರಿಸುವುದು ಹೇಗೆ?’ ಎಂದು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಬಾಬುರಾವ ಎಸ್. ಬೆಳಗೆ ಪ್ರಶ್ನಿಸಿದರು.

ಕುಲಪತಿ ಹಾಗೂ ಕುಲಸಚಿವರ ವಿರುದ್ಧ ಘೋಷಣೆ ಕೂಗಿದ ವಿದ್ಯಾರ್ಥಿಗಳು, ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಿರಂಜಿವಿ ಬಬ್ಲಾದಕರ್, ಉಮೇಶ ವಾಲೀಕರ, ಜಂಟಿ ಕಾರ್ಯದರ್ಶಿ ಸುಭಾಸ ಸೂರ್ಯನವರ್, ಆಕಾಶ ಮೇಟಿ, ಖಜಾಂಚಿ ಆಕಾಶ ಕಾಂಬ್ಳೆ, ಮರಿಯಪ್ಪ ತಾಲ್ಕೇರಿ, ಆಕಾಶ ಸಿಂಗೆಕಾರ, ಸುಭಾಸ ಕಲಶೆಟ್ಟಿ, ಕೃಷ್ಣ ಗುರುಮಿಟಕಲ್‌, ಮಂಜುನಾಥ ಜಮಾದಾರ, ಸುರೇಶ ರೆಡ್ಡಿ, ಹುಸೇನಿ ಎಸ್. ಪಾಳಾ ಹಾಗೂ ಕೆಲ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT