ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಜೆಟ್: ವಾಸ್ತವ ಮುಚ್ಚಿ ಹಾಕುವ ಸುಳ್ಳಿನ ಕಂತೆ’: ಎಚ್‌.ವಿ. ದಿವಾಕರ್ ಟೀಕೆ

Last Updated 3 ಫೆಬ್ರುವರಿ 2023, 6:27 IST
ಅಕ್ಷರ ಗಾತ್ರ

ಕಲಬುರಗಿ: ಹಣಕಾಸು ಸಚಿವರು ಮಂಡಿಸಿದ ಕೇಂದ್ರ ಬಜೆಟ್ ಅರ್ಥಹೀನ ಪದಪುಂಜಗಳ ಮೂಲಕ ವಾಸ್ತವವನ್ನು ಮುಚ್ಚಿಹಾಕುವ ಸುಳ್ಳಿನ ಕಂತೆಯಾಗಿದೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ–ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್‌.ವಿ. ದಿವಾಕರ್ ಟೀಕಿಸಿದ್ದಾರೆ.‌

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಂಗಡ ಪತ್ರವು ದೇಶದಲ್ಲಿರುವ ತೀವ್ರ ಆರ್ಥಿಕ ಕುರಿತ ಅಣಕು ದಾಖಲೆಯಂತಿದ್ದು, ಇದರ ಹೊರೆಯನ್ನು ಹೊತ್ತು ಮಿಲಿಯಾಂತರ ದುಡಿಯುವ ಜನರ ದಿವಾಳಿಯಾಗುತ್ತಿದ್ದಾರೆ. ಕೆಲವು ‘ಸದ್ಭಾವನೆ’ಯ ಹಂಚಿಕೆಗಳಲ್ಲಿ ಅತ್ಯಲ್ಪ ಹೆಚ್ಚಳ ಅಥವಾ ವೈಯಕ್ತಿಕ ತೆರಿಗೆಗಳಲ್ಲಿ ಸಾಂಕೇತಿಕ ಕೊಡುಗೆಗಳು ಅಥವಾ 80 ಕೋಟಿ ಜನರಿಗೆ ಇನ್ನೂ ಒಂದು ವ‌ರ್ಷ ಉಚಿತ ಪಡಿತರವನ್ನು ಮುಂದುವರಿಸುವ ಕುರಿತು ಕೊಚ್ಚಿಕೊಳ್ಳುವುದು ವಂಚನೆಯಾಗುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಶೇ 30ರಷ್ಟು ಏರಿಕೆಯಾದ ಹಣದುಬ್ಬರಕ್ಕೆ ಹೋಲಿಸಿದರೆ ಈ ಪರಿಹಾರ ತುಂಬ ಕಡಿಮೆಯಿದೆ ಮತ್ತು ಹೆಚ್ಚಿನ ಸಂಕಟವನ್ನಷ್ಟೇ ನೀಡಲಾಗಿದೆ’ ಎಂದಿದ್ದಾರೆ.

‘ಇಂತಹ ಕೊಡುಗೆಗಳನ್ನು ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ಚುನಾವಣಾ ಪೂರ್ವ ‘ಮಿಠಾಯಿ’ ಎಂದು ಅಪಹಾಸ್ಯ ಮಾಡಿದ್ದರು. ಚುನಾವಣೆಗೆ ಮುನ್ನ ಪ್ರಧಾನಿ ನೀಡಿದ್ದ ದೊಡ್ಡ ಭರವಸೆಗಳ ಭರಾಟೆಯ ಬಗ್ಗೆ ಯಾವುದೇ ಉಲ್ಲೇಖವನ್ನು ಎಚ್ಚರಿಕೆಯಿಂದ ತಪ್ಪಿಸಲಾಗಿದೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT