ಚಿಂಚೋಳಿ: ‘ತಾಲ್ಲೂಕಿನ ಸುಲೇಪೇಟದ ಆರಾಧ್ಯದೇವ ವೀರಭದ್ರೇಶ್ವರ ಜಾತ್ರೆ ಅಂಗವಾಗಿ 17 ದಿನಗಳ ಜೋಡು ಪಲ್ಲಕ್ಕಿ ಉತ್ಸವ ನಡೆಸಿದ ಭಕ್ತರು ಬುಧವಾರದಿಂದ ಉಚ್ಚಾಯ ಮೆರವಣಿಗೆ ಪ್ರಾರಂಭವಾಗಿದೆ’ ಎಂದು ಭಕ್ತರಾದ ಚೇತನ ಅಣವಾರ ತಿಳಿಸಿದ್ದಾರೆ.

‘ಮಾ.19ರಿಂದ ಏ.6ವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಸಿದ್ದು, ಏ.8 ರಿಂದ 16ವರೆಗೆ ಉಚ್ಚಾಯ ಮೆರವಣಿಗೆ, ಏ.16ರಂದು ಗುರುವಾರ ಬೆಳಿಗ್ಗೆ ಆಕರ್ಷಕ ಪ್ರಭಾವಳಿ ಉತ್ಸವ ಹಾಗೂ ಸಂಜೆ 6ಗಂಟೆಗೆ ವೀರಭದ್ರೇಶ್ವರ ರಥೋತ್ಸವ ಭಕ್ತಿಶ್ರದ್ಧೆಯಿಂದ ಜರುಗಲಿದೆ. ಜಿಲ್ಲೆಯ ದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ವ್ಯಾವಹಾರಿಕ ಪಟ್ಟಣದ ಸುಲೇಪೇಟದ ವೀರಭದ್ರೇಶ್ವರ ಜಾತ್ರೆ ಸಡಗರ ಗ್ರಾಮದಲ್ಲಿ ಕಳೆಗಟ್ಟಿದ್ದು, ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ’ ಎಂದಿದ್ದಾರೆ.

‘ಜಾತ್ರೆಯ ಅಂಗವಾಗಿ ಏ.9ರಿಂದ 13ವರೆಗೆ ಅಧ್ಯಾತ್ಮಿಕ ಪ್ರವಚನ ಸುಲೇಪೇಟದ ಖಟ್ವಾಂಗೇಶ್ವರ ವಿರಕ್ತ ಮಠದ ಪ್ರಭು ಖಟ್ವಾಂಗೇಶ್ವರ ದೇವರು ನಡೆಸಿಕೊಡಲಿದ್ದಾರೆ. ಭಾಗೇಶ ರಾಣಾಪುರ ಸಂಗೀತ, ಗುರುಸ್ವಾಮಿ ಐನೋಳ್ಳಿ ತಬಲಾ ಸೇವೆ ಸಲ್ಲಿಸಲಿದ್ದಾರೆ’ ಎಂದು ಹೇಳಿದ್ದಾರೆ.

‘ಏ.11, 12ರಂದು 2000ನೇ ಸಾಲಿನ ಎಸ್ಎಸ್ಎಲ್ಸಿ ಬ್ಯಾಚಿನ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಖಟ್ವಾಂಗೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದು ಇದೇ ಬ್ಯಾಚಿನವರು ಏ.16ರಂದು ಅನ್ನದಾಸೋಹ ಹಮ್ಮಿಕೊಂಡಿದ್ದಾರೆ. 1997ರ ಎಸ್ಎಸ್ಎಲ್ಸಿ ಬ್ಯಾಚಿನವರಿಂದ ನೂತನ ಅಗ್ನಿಕುಂಡ ಲೋಕಾರ್ಪಣೆ, 2009ರ ಬ್ಯಾಚಿನವರಿಂದ ಹಾಸ್ಯ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏ.15ರಂದು ರಮೇಶ ಮೋಟರ್ಸ್ ವತಿಯಿಂದ ಅನ್ನದಾಸೋಹ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-31-1987327410

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.