ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೌರಿಕರಿಗೆ ಕಿಟ್‌, ನಿರಾಶ್ರಿತರಿಗೆ ಹಾಸ್ಟೆಲ್‌ಗಳಲ್ಲಿ ಆಶ್ರಯ: ಕಾರಜೋಳ ಸೂಚನೆ

ಊಟ, ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ: ಕಾರಜೋಳ ಸೂಚನೆ
Last Updated 23 ಏಪ್ರಿಲ್ 2020, 17:17 IST
ಅಕ್ಷರ ಗಾತ್ರ

ಕಲಬುರ್ಗಿ: ‘ಊಟ ಇಲ್ಲ ಎಂದು ಬರುವ ಬಡವರು ಹಾಗೂ ನಿರಾಶ್ರಿತರಿಗೆ ಸಮಾಜ ಕಲ್ಯಾಣ ‌ಇಲಾಖೆಯ ವಸತಿ ನಿಲಯಗಳಲ್ಲಿ ಆಶ್ರಯ ಕಲ್ಪಿಸಬೇಕು. ಅವಶ್ಯ ಇರುವ ಕಡೆಗಳಲ್ಲಿ ವಸತಿ ನಿಲಯಗಳನ್ನು ತಕ್ಷಣವೇ ತೆರೆಯಬೇಕು’ ಎಂದು ಸಮಾಜ ಕಲ್ಯಾಣ ಖಾತೆಯನ್ನೂ ಹೊಂದಿರುವಉಪ ಮುಖ್ಯಮಂತ್ರಿ ಗೋವಿಂದ ‌ಕಾರಜೋಳ ಆದೇಶಿಸಿದರು.

‘ರಾಜ್ಯದ ವಸತಿ ನಿಲಯಗಳಲ್ಲಿ 14,800 ಕ್ವಿಂಟಲ್ ಅಕ್ಕಿ, 4,800 ಕ್ವಿಂಟಲ್ ರವೆ, ಇಡ್ಲಿ ರವೆ, ಎಣ್ಣೆ ಇದೆ. ತರಕಾರಿಯನ್ನಷ್ಟೇ ಖರೀದಿಸಬೇಕು. ಆಶ್ರಯ ಬಯಸಿ ಬಂದವರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಚಹಾ ಹಾಗೂ ರಾತ್ರಿ ಊಟ ಕೊಡಬೇಕು. ಬೆಡ್ ಶೀಟ್, ಟವೆಲ್ ಖರೀದಿಸಿ ಕೊಡಿ ಮತ್ತು ಅವುಗಳನ್ನು ವಾಪಸ್‌ ಪಡೆಯಬೇಡಿ. ಊಟ ಹಾಕುವ ಹಾಗೂ ಆಶ್ರಯ ನೀಡುವ ವಿಚಾರದಲ್ಲಿ ಹಿಂದೆ ಮುಂದೆ ನೋಡಬೇಡಿ’ ಎಂದು ಗುರುವಾರ ಇಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದರು.

ಕ್ಷೌರಿಕರಿಗೆ ಕಿಟ್‌:‘ಕ್ಷೌರಿಕರ‌ ಅಂಗಡಿಗಳು ಬಂದ್ ಆಗಿರುವುದರಿಂದ ಸವಿತಾ ‌ಸಮಾಜದವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ₹ 1,200 ಮೊತ್ತದ ಅಗತ್ಯ ವಸ್ತುಗಳನ್ನು ನೀಡಬೇಕು‘. ಅವರ ಸಂಖ್ಯೆ ಎಷ್ಟಿದೆ ಎಂದು ಪಟ್ಟಿ ಮಾಡಿ ಕೂಡಲೇ ಕಾರ್ಯೋನ್ಮುಖರಾಗಬೇಕು’ ಎಂದೂ ಜಿಲ್ಲಾಧಿಕಾರಿ ಶರತ್‌ ಬಿ. ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT