ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆವೈಡಿಸಿಸಿ ಬ್ಯಾಂಕ್ ಹಂಗಾಮಿ ಅಧ್ಯಕ್ಷರಾಗಿ ಸುರೇಶ ಸಜ್ಜನ್‌ ಆಯ್ಕೆ

Published 2 ಜೂನ್ 2023, 14:52 IST
Last Updated 2 ಜೂನ್ 2023, 14:52 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಭಾರಿ ಅಧ್ಯಕ್ಷರಾಗಿ ಸುರೇಶ ಸಜ್ಜನ್‌ ಸುರಪುರ ಅವರು ಆಯ್ಕೆ ಆಯ್ಕೆಯಾಗಿದ್ದಾರೆ.

ನಗರದ ಗಾಜಿಪುರದಲ್ಲಿರುವ ಬ್ಯಾಂಕಿನ ಸಭಾಂಗಣದಲ್ಲಿ ಶುಕ್ರವಾರ ಈ ಹಿಂದೆ ಅಧ್ಯಕ್ಷರಾಗಿದ್ದ ರಾಜಕುಮಾರ ಪಾಟೀಲ ತೇಲ್ಕೂರ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಜರುಗಿದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಎಲ್ಲ ನಿರ್ದೇಶಕರ ಜೊತೆ ಚರ್ಚೆ ನಡೆಸಿ ನಿಯಮದಂತೆ ಹಾಲಿ ಉಪಾಧ್ಯಕ್ಷರಾಗಿರುವ ಸುರೇಶ ಸಜ್ಜನ ಅವರನ್ನು ಸರ್ವಾನುಮತದಿಂದ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಸಿಇಒ ಮತ್ತು ಎಂಡಿ ವಿಶ್ವನಾಥ ಮಲಕೂಡ ಅವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ನಿರ್ದೇಶಕರು ಹಾಗೂ ಅಧಿಕಾರಿಗಳು ಸಜ್ಜನ್‌ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಬ್ಯಾಂಕಿನ ಮುಂದೆ ಸಜ್ಜನ್‌ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

‘ಮುಂಗಾರು ಹಂಗಾಮು ಆರಂಭ ಆಗುತ್ತಿರುವುದರಿಂದ ರೈತರಿಗೆ ಸಾಲ ವಿತರಿಸುವ ಕುರಿತು ಶೀಘ್ರವೇ ಜಿಲ್ಲೆ ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು, ನಬಾರ್ಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ರೈತರಿಗೆ ಅನುವು ಮಾಡಿಕೊಡಲು ಪ್ರಯತ್ನಿಸುತ್ತೇನೆ. ಬ್ಯಾಂಕ್‌ನ್ನು ಮತ್ತಷ್ಟು ಬಲಗೊಳಿಸಿ ಕೃಷಿಕರಿಗಾಗಿ ಹೊಸ ಯೋಜನೆಗಳನ್ನು ರೂಪಿಸಲು ಬ್ಯಾಂಕ್ ಅಧಿಕಾರಿಗಳ ಹಾಗೂ ನಿರ್ದೇಶಕರ ಸಭೆ ನಡೆಸಲಾಗುವುದು’ ಎಂದು ಸುರೇಶ ಸಜ್ಜನ್‌ ಅವರು ಪ್ರತಿಕ್ರಿಯಿಸಿದರು.

ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಶಿವಾನಂದ ಮಾನಕರ್, ಕೆವೈಡಿಸಿಸಿ ನಿರ್ದೇಶಕರಾದ ಸೋಮಶೇಖರ ಗೋನಾಯಕ, ಶರಣಬಸಪ್ಪ ಪಾಟೀಲ ಅಷ್ಟಗಿ, ಬಾಪುಗೌಡ ಪಾಟೀಲ ಹುಣಸಗಿ, ಸಿದ್ರಾಮರಡ್ಡಿ ಕೌಳೂರ ಯಾದಗಿರಿ, ಗೌತಮ ಪಾಟೀಲ ಚಿಂಚೋಳಿ, ಬಸವರಾಜ ಪಾಟೀಲ ಹೇರೂರ, ಅಶೋಕ ಸಾವಳೇಶ್ವರ ಆಳಂದ, ಚಂದ್ರಶೇಖರ ತಳ್ಳಳ್ಳಿ, ನಿಂಗಣ್ಣ ದೊಡ್ಡಮನಿ, ಉತ್ತಮ ಬಜಾಜ ಇದ್ದರು.

ಕಿಶೋರ ಸೇಠ ಸುರಪುರ, ಪ್ರಕಾಶ ಸಜ್ಜನ, ರಾಜಾ ಮುಕುಂದ ನಾಯಕ, ಮಂಜುನಾಥ ಗುಳಗಿ, ಮಲ್ಲಿಕಾರ್ಜುನ ರಡ್ಡಿ ಹತ್ತಿಕುಣಿ, ಶಾಂತರಡ್ಡಿ ಚೌಧರಿ ಮುದನೂರ, ವಿಶ್ವರಾಧ್ಯ ಸತ್ಯಂಪೇಟೆ, ರೇವಣಸಿದ್ದಪ್ಪ ಸಂಕಾಲಿ, ಶರಣು ಬಿಲ್ಲಾಡ, ಚಂದ್ರಕಾಂತ ಗೌಡರ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT