ಬುಧವಾರ, ನವೆಂಬರ್ 13, 2019
22 °C
ಪ್ರಬುದ್ಧ ಸಮಾಜ ನಿರ್ಮಾಣ ಮಠಾಧೀಶರಿಂದ ಮಾತ್ರ ಸಾಧ್ಯ: ಪ್ರಿಯಾಂಕ್‌

ಮಲ್ಲಣ್ಣಪ್ಪ ಸ್ವಾಮಿಗಳ 55ನೇ ಜನ್ಮದಿನೋತ್ಸವ

Published:
Updated:
Prajavani

ಶಹಾಬಾದ್‌: ‘ಪ್ರಬುದ್ಧ ಸಮಾಜ ಕಟ್ಟುವ ಕೆಲಸ ಸ್ವಾಮೀಜಿಗಳ ಮಾರ್ಗದರ್ಶನದಿಂದ ಮಾತ್ರ ಸಾಧ್ಯ’ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಹೇಳಿದರು.

ಶಹಾಬಾದ್‌ ತಾಲ್ಲೂಕಿನ ತೊನಸನಳ್ಳಿ (ಎಸ್) ಗ್ರಾಮದ ಅಲ್ಲಮ ಪ್ರಭು ಸಂಸ್ಥಾನ ಪೀಠದ ಮಲ್ಲಣ್ಣಪ್ಪ ಸ್ವಾಮಿಗಳ 55ನೇ ಜನ್ಮದಿನೋತ್ಸವ ಹಾಗೂ ₹1 ಕೋಟಿ ವೆಚ್ಚದ ಯಾತ್ರಿ ನಿವಾಸ ಕಟ್ಟಡದ ಲೋಕಾರ್ಪಣೆ, ತುಲಾಭಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ಕೋಲಿ, ಕುರುಬ ಸಮಾಜವನ್ನು ಎಸ್‍ಟಿಗೆ ಸೇರಿಸಲು ನಿರಂತರ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು.

ಸಾನ್ನಿಧ್ಯ ವಹಿಸಿದ ಚಿತ್ತಾಪುರ ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯರು ಆಶೀರ್ವಚನ ನೀಡುತ್ತ ‘ಚಿತ್ತಾಪುರ ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚು ಹಣ ತಂದಿರುವ ಕೀರ್ತಿ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸಲ್ಲುತ್ತದೆ, ತೊನಸನಳ್ಳಿ ಮಠಕ್ಕೆ ₹1 ಕೋಟಿ ಅನುದಾನ ತಂದು ಕಟ್ಟಡ ನಿರ್ಮಿಸಿದ್ದು, ನುಡಿದಂತೆ ನಡೆದ ಶಾಸಕರಾಗಿದ್ದಾರೆ’ ಎಂದು ಶ್ಲಾಘಿಸಿದರು.

ಮಲ್ಲಣ್ಣಪ್ಪ ಸ್ವಾಮಿಗಳು ಭಕ್ತ ಪರಮಾನಂದ ಯಲಗೋಡಕರ್ ಅವರಿಂದ ನಾಣ್ಯಗಳಿಂದ ತುಲಾಭಾರ, ಭಕ್ತರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿ,‘ಭಕ್ತರೇ ಈ ಮಠದ ನಿಜವಾದ ಆಸ್ತಿ’ ಎಂದರು.

ಬೆಳ್ಳಿ ಕಿರೀಟ: ಪ್ರಿಯಾಂಕ್‌ ಖರ್ಗೆ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸತ್ಕರಿಸಲಾಯಿತು. ಮುಗುಳನಾಗಾವದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಯರಗೋಳ ಸಂಗಮೇಶ ದೇವರು, ಚಟ್ನಳ್ಳಿ ಪೂಜ್ಯರು ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ.ಅರ್., ಜಿ.ಪಂ ಪ್ರತಿ ಪಕ್ಷದ ನಾಯಕ ಶಿವಾನಂದ ಪಾಟೀಲ, ಸದಸ್ಯ ಶಿವರುದ್ರಭೇಣಿ, ತಾ.ಪಂ ಅಧ್ಯಕ್ಷ ಜಗನ್ನಾಥರೆಡ್ಡಿ ರಾಮತೀರ್ಥ, ಶಹಾಬಾದ್ ಬಿಸಿಸಿ ಅಧ್ಯಕ್ಷ ಡಾ.ಎಂ.ಎ.ರಶೀದ, ವಾಡಿ ಬಿಸಿಸಿ ಅಧ್ಯಕ್ಷ ಮಹಿಮೂದ ಸಾಹೇಬ, ಚಿತ್ತಾಪುರ ಬಿಸಿಸಿ ಅಧ್ಯಕ್ಷ ಭೀಮಣ್ಣ ಸಾಲಿ, ಜಿ.ಪಂ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ ಬಾಗೋಡಿ, ನಾಗರೆಡ್ಡಿ ಕರದಾಳ, ಅಣವೀರ ಇಂಗಿನಶೆಟ್ಟಿ, ಗಿರೀಶ ಕಂಬಾನೂರ, ಮಹಾಂತೇಶ ಪೂಜಾರಿ, ಶರಣಬಸಪ್ಪ ಧನ್ನಾ, ತಾ.ಪಂ ಮಾಜಿ ಸದಸ್ಯ ನಿಂಗಣ್ಣ ಹುಳಗೋಳ, ಗ್ರಾ.ಪಂ ಅಧ್ಯಕ್ಷ ವಿಜಯಾನಂದ ಮಾಣಿಕ, ರುದ್ರಗೌಡ ಮಾಲಿ ಪಾಟೀಲ, ದೇವೆಂದ್ರ ಕಾರೊಳ್ಳಿ, ಆನಂದ ಕೊಡಸಾ, ಪೀರ ಪಾಶಾ, ಶಿವಲಿಂಗಪ್ಪ ಗೊಳೇದ, ಮಹಾದೇವ ಬಂದಳ್ಳಿ, ವಿರೇಶ ಗೊಳೇದ, ಮೃತ್ಯುಂಜಯ ಸ್ವಾಮಿ ಹಿರೇಮಠ, ಮಲ್ಲಣ್ಣ ಸಣಮೋ, ಮಲ್ಲಿಕಾರ್ಜುನ ಇಟಗಿ, ಮಲ್ಲಿಕಾರ್ಜುನ ಮರತೂರ ಇದ್ದರು. ಬಸವರಾಜ ಹೇರೂರ ನಿರೂಪಿಸಿದರು.

ಪ್ರತಿಕ್ರಿಯಿಸಿ (+)