ಕಲಬುರಗಿ: ಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ ಎರಡನೇ ಸಲ ಚಾಂಪಿಯನ್ ಆದ ಬೆನ್ನಲ್ಲೆ ನಗರದಲ್ಲಿ ಯುವಜನರು ಬೀದಿಗಳಿದು ಸಂಭ್ರಮಾಚರಣೆ ನಡೆಸಿದರು.

ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಗೆಲುವು ಬೀರಿತು. ಈ ಬೆನ್ನಲ್ಲೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾಯಿಸಿದ ಯುವಜನರು ರಸ್ತೆಯಲ್ಲಿ ಪಟಾಕಿ ಸಿಡಿಸಿದರು. ದೊಡ್ಡಮಟ್ಟದ ಸಿಡಿಮದ್ದುಗಳು ಬಾನಿನಲ್ಲಿ ಚಿತ್ತಾರ ಬಿಡಿಸಿದವು. ಈ ವೇಳೆ ಭಾರತ ತಂಡದ ಪರ ಹಾಗೂ ಭಾರತ ಮಾತಾಕೀ ಜೈ ಘೋಷಣೆಗಳೂ ಮೊಳಗಿದವು.

ತ್ರಿವರ್ಣ ಧ್ವಜ ಹಿಡಿದು ನೃತ್ಯ ಮಾಡಿ ಖುಷಿ ಪಟ್ಟರು. ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಖರೀದಿಸಿದ್ದ ಪ್ಲಾಸ್ಟಿಕ್ ತುತ್ತೂರಿಗಳನ್ನು (ಪೀಪಿ) ಮನಸೋ ಇಚ್ಛೆ ಊದುತ್ತ ಸಂಭ್ರಮಿಸಿದರು.

ಹಲವರು ಬೈಕ್ಗಳ ‘ಎಕ್ಸೆಲೇಟರ್’ ಕಿವಿ ಹಿಂಡುತ್ತ ಮುಖ್ಯ ರಸ್ತೆಗಳಲ್ಲಿ ಸುತ್ತಾಡಿದರು. ಕೆಲವರು ಹಲಗೆ ಬಾರಿಸುತ್ತ ಬೈಕ್ ರ್ಯಾಲಿಯನ್ನೂ ನಡೆಸಿದರು. ಮತ್ತೆ ಕೆಲವರು ಕಾರುಗಳ ರನ್ ರೂಫ್ ತೆರೆದು ತ್ರಿವರ್ಣ ಬಾವುಟ ಹಿಡಿದು ‘ಭಾರತ ಮಾತಾ ಕೀ ಜೈ’ ಘೋಷಣೆ ಕೂಗುತ್ತ ನಗರದಲ್ಲಿ ಸುತ್ತಾಡಿದರು.

ಎಸ್ವಿಪಿ ವೃತ್ತದಲ್ಲಿ ಯುವಜನರು ದಿಢೀರ್ ವಿಜಯೋತ್ಸವ ಆಚರಿಸಿದ್ದರಿಂದ ವಾಹನಗಳ ಸಂಚಾರಕ್ಕೆ ತೊಡಕಾಯಿತು. ಸ್ಥಳಕ್ಕೆ ಧಾವಿಸಿದ ಸ್ಟೇಷನ್ ಬಜಾರ್ ಪೊಲೀಸರು ವಿಜಯೋತ್ಸವದ ‘ಗುಂಗಿ’ನಲ್ಲಿದ್ದ ಯುವಜನರ ಮನವೊಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.