ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ

Last Updated 6 ನವೆಂಬರ್ 2019, 14:05 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆನೆಕಾಲು ರೋಗದ ನಿಯಂತ್ರಣ ಹಾಗೂ ಮುಂಜಾಗೃತಾ ಕ್ರಮವಾಗಿ ಸಾಮೂಹಿಕ ಮಾತ್ರೆಗಳ ನುಂಗಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ. ಸೋಮವಾರ ಚಾಲನೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 5,84,405 ಕುಟುಂಬಗಳಿಗೆ ಮಾತ್ರೆಗಳನ್ನು ನುಂಗಿಸುವ ಗುರಿ ಹೊಂದಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಕಾರ್ಯಕರ್ತೆಯರು ಮನೆಗೆ ಬಂದು ನೀಡಿದ ಮಾತ್ರೆಗಳನ್ನು ನುಂಗಬೇಕು.

ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಬಸವರಾಜ ಗುಳಗಿ ಮಾತನಾಡಿ, ಆನೆಕಾಲು ರೋಗ ಸಾಂಕ್ರಾಮಿಕ ರೋಗವಾಗಿದೆ. ಜಿಲ್ಲೆಯಾದ್ಯಂತ ಹೆಚ್ಚುವರಿ ಸುತ್ತಿನ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮವನ್ನು ನವೆಂಬರ್ 4ರಿಂದ 8ರವರೆಗೆ ಏರ್ಪಡಿಸಲಾಗಿದೆ ಎಂದರು.

‌ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಕೆ.ಪಾಟೀಲ ಮಾತನಾಡಿ, ಜಿಲ್ಲೆಯ ಎಲ್ಲ ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ ಪ್ರತಿ 50 ಮನೆಗೆ ಒಬ್ಬರಂತೆ ಒಟ್ಟು 2925 ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು 5,84,405 ಮನೆ ಮನೆಗೆ ತೆರಳಿ ಭೇಟಿ ಮಾಡಿ ಮನೆಯಲ್ಲಿರುವವರಿಗೆ ವಯಸ್ಸಿಗನುಗುಣವಾಗಿ ಡಿಇಸಿ ಹಾಗೂ ಅಲ್ಬೆಂಡೆಜೋಲ್ ಮಾತ್ರೆಗಳನ್ನು ನುಂಗಿಸುತ್ತಾರೆ. ಪ್ರತಿ 10 ಜನ ಔಷಧ ವಿತರಕರಿಗೆ ಒಬ್ಬರಂತೆ ಒಟ್ಟು 283 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಮಾತ್ರೆಗಳನ್ನು ನುಂಗಿದ ನಂತರ ಅಡ್ಡ ಪರಿಣಾಮಳೇನಾದರೂ ಉಂಟಾದರೆ ಅಂತಹ ಸಂದರ್ಭದಲ್ಲಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಅವಶ್ಯಕ ಔಷಧ ದಾಸ್ತಾನುಗಳೊಂದಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಹಾಗೂ ಆಯಾ ತಾಲ್ಲೂಕಿಗೆ ಒಬ್ಬರಂತೆ ತಾಲ್ಲೂಕಾ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಂದು ವೇಳೆ ತಮ್ಮ ಮನೆಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೋಗಿರುವ ವ್ಯಕ್ತಿಗಳು ಸಂಜೆ ವೇಳೆಗೆ ಮನೆಗೆ ಬಂದಾಗ ಅಂಥವರಿಗೆ ಔಷಧ ನುಂಗಿಸಲು ರಾತ್ರಿ 9ರವರೆಗೆ ಇಲಾಖೆಯ ಆರೋಗ್ಯ ಸಂಸ್ಥೆಗಳಲ್ಲಿ ಔಷಧ ನೀಡುವ ಬೂತ್‌ಗಳ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಸಂದೇಹಗಳಿದ್ದರೆ 94486 51088, 95384 05999 ಸಂಖ್ಯೆಗಳಿಗೆ ಕರೆ ಮಾಡಬಹುದು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ನರ್ಸಿಂಗ್ ಶಾಲೆಯ ಪ್ರಾಂಶುಪಾಲ ವಸಂತಕುಮಾರಿ, ವಲಯ ಕೀಟಶಾಸ್ತ್ರಜ್ಞರಾದ ಗಂಗೋತ್ರಿ ಐ.ಸಿ., ಉಪನ್ಯಾಸಕ ಮಡಿವಾಳಪ್ಪ ನಾಗರಳ್ಳಿ, ಪ್ರಿಸ್ಟಿಲ್ಲಾ, ಜಿಲ್ಲಾ ಸಮಾಲೋಚಕರಾದ ಕಾರ್ಣಿಕ ಕೋರೆ, ಜಾವೇದ್‌ ಅಲಿ, ಖಯ್ಯೂಮ್ ಹಾಗೂ ನರ್ಸಿಂಗ ಶಾಲೆಯ ಎಲ್ಲ ವಿಧ್ಯಾರ್ಥಿಗಳು, ಎಎನ್ಎಂ ಹಾಗೂ ಎಲ್.ಎಚ್.ವಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚಾಮರಾಜ ದೊಡಮನಿ ಕಾರ್ಯಕ್ರಮ ನಿರೂಪಿಸಿದರು ಚಂದ್ರಕಾಂತ ಏರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT