ಕಮಲಾಪುರ: ತಾಲ್ಲೂಕಿನ ತಡಕಲ ಗ್ರಾಮದಲ್ಲಿ ನೀರಿನ ಮೋಟರ್ ಕೆಟ್ಟು ತಲೆದೋರಿದ್ದ ನೀರಿನ ಸಮಸ್ಯೆಗೆ ಪಂಚಾಯಿತಿ ಪರಿಹಾರ ಒದಗಿಸಿದೆ.

ಈ ಕುರಿತು ಶನಿವಾರ ‘ತಡಕಲ್ ಗ್ರಾಮದಲ್ಲಿ ನೀರಿಗಾಗಿ ಜನರ ಪರದಾಟ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟಗೊಳಿಸಲಾಗಿತ್ತು. ಬೆಳಿಗ್ಗೆ ಗಮನಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಪಾಟೀಲ, ಪಂಚಾಯಿತಿ ವಿಶೇಷಾಧಿಕಾರಿ ತಹಶೀಲ್ದಾರ್ ಮೊಹಮ್ಮದ್ ಮೋಸಿನ್ ಅಹಮ್ಮದ್ ಸೇರಿ ಪಿಡಿಒ ವಾಹೇದಲಿ ನಾಗೂರ ಅವರಿಗೆ ತುರ್ತು ಕ್ರಮ ಕೈಗೊಂಡು ಸಮಸ್ಯ ಪರಿಹರಿಸುವಂತೆ ಸೂಚಿಸಿದ್ದಾರೆ.

ನಾಗೂರ ಪಂಚಾಯಿತಿ ಪಿಡಿಒ ವಾಹೇದಲಿ ಗ್ರಾಮಕ್ಕೆ ಭೇಟಿ ನೀಡಿ, ಸುಟ್ಟಿದ್ದ ಮೋಟಾರ್, ಸ್ಟಾಟರ್ ದುರಸ್ತಿ ಹಾಗೂ ವಿದ್ಯುತ್ ಸಂಪರ್ಕ ಸರಿಗೊಳಿಸಿ ನೀರು ಸರಬರಾಜು ಆಗುವವರೆಗೆ ಅಲ್ಲಿಂದ ಕದಲಲಿಲ್ಲ. ಸದ್ಯ ನೀರಿನ ಸಮಸ್ಯೆ ಪರಿಹಾರವಾಗಿದೆ ಎಂದು ರಾಮಕುಮಾರ ಧಾಕಲಿ, ನಿರಂಜನ ಪಾಟೀಲ ತಿಳಿಸಿದರು.

ಖಾಸಗಿ ಕೊಳವೆ ಬಾವಿಯಿಂದ ನೀರು ಪೂರೈಕೆಗೆ ಕ್ರಮ

ಚಿಂಚೋಳಿ: ಕುಡಿಯುವ ನೀರಿನ ಅಭಾವದಿಂದ ಕಂಗಾಲಾಗಿ ಹಾಹಾಕಾರ ನಡೆಸುತ್ತಿರುವ ಕಲಭಾವಿ ತಾಂಡಾಕ್ಕೆ ಗ್ರಾಮೀಣ ನೀರು ಪೂರೈಕೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಮೇಶ ಚವ್ಹಾಣ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

‘ಕೊಳವೆಬಾವಿಗೆ ಹೊಸದಾಗಿ ಸಿಂಗಲ್ ಫೇಸ್ ಮೋಟಾರ್ ಕೂಡಿಸಲು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಇದರ ಜತೆಗೆ ತಾಂಡಾದ ವ್ಯಕ್ತಿಯೊಬ್ಬರ ಹೊಲದಲ್ಲಿ ಕೊಳವೆ ಬಾವಿಗೆ 4 ಇಂಚು ನೀರು ಲಭಿಸಿದ್ದು, ಅವರ ಮನವೊಲಿಸಿ ಬಾಡಿಗೆ ಆಧಾರದಲ್ಲಿ ಕೊಳವೆಬಾವಿ ಪಡೆದುಕೊಳ್ಳಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

‘ತಾಂಡಾದಲ್ಲಿ ಸಿಂಗಲ್ ಫೇಸ್ ಮೋಟಾರ್ ಸುಟ್ಟಿದ್ದು ದುರಸ್ತಿ ಮಾಡಿಸಲು ಕಾರ್ಮಿಕರು ಬಂದು ಕೊಳವಿಬಾವಿಯಿಂದ ಮೋಟಾರ್ ತೆಗೆದುಕೊಂಡು ಹೋಗಿದ್ದಾರೆ. ಇದಲ್ಲದೇ ಇನ್ನೊಂದು ಕೊಳವೆ ಬಾವಿಗೆ ಹೊಸದಾಗಿ ಸಿಂಗಲ್ ಫೇಸ್ ಮೋಟಾರ್ ಕೂಡಿಸಲು ಸೂಚಿಸಿದ್ದೇನೆ. ಸಮಸ್ಯೆ ಕುರಿತು ತಹಶೀಲ್ದಾರ್ ಜತೆಗೆ ಚರ್ಚಿಸಲಾಗಿದ್ದು, ಕೊಳವೆಬಾವಿ ಬಾಡಿಗೆ ಪಡೆಯಲು ಅವರು ಮತ್ತು ಪಿಡಿಒ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಉಮೇಶ ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿಕಾರಿಗಳೊಂದಿಗೆ ಪಿಡಿಒ ಸುನೀಲಕುಮಾರ, ತಾ.ಪಂ ಸಹಾಯಕ ನಿರ್ದೇಶಕ ನಾಗೇಂದ್ರ ಬೆಡಕಪಳ್ಳಿ ಹಾಗೂ ಡಿಇಒ ರಾಜಶೇಖರ ಹಿತ್ತಲ್, ತಾಂಡಾದ ಮುಖಂಡರಾದ ತಾರಾಸಿಂಗ್, ಗೋಪಾಲ, ಲಕ್ಷ್ಮಣ, ಮಾಣಿಕ ಕೇಶು, ನಾಮದೇವ ಮೊದಲಾ ದವರು ಇದ್ದರು. ಕಲಭಾವಿ ತಾಂಡಾದಲ್ಲಿ ಜೀವಜಲಕ್ಕೆ ಹಾಹಾಕಾರ ದಾಹ ನೀಗಿಸದ ಜೆಜೆಎಂ ಯೋಜನೆ ಕುರಿತು ‘ಪ್ರಜಾವಾಣಿ’ಯ ಏ.11ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿದ್ದು, ಇಲ್ಲಿ ಸ್ಮರಿಸಬಹುದಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-31-511336036

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.