ಕಮಲಾಪುರ: ತಾಲ್ಲೂಕಿನ ಕಗ್ಗನಮರಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಬೆಳಿಗ್ಗೆ ಧಿಡೀರ್ ಭೇಟಿ ನೀಡಿದ ಕಲಬುರಗಿ ಜಿಲ್ಲಾ ಪಂಚಾಯಿತಿ ಅಕ್ಷರ ದಾಸೋಹ ಯೋಜನೆ ಜಿಲ್ಲಾ ಶಿಕ್ಷಣಾಧಿಕಾರಿ ಈಶ್ವರಪ್ಪ ನಿರಡಗಿ ಸಕಾಲಕ್ಕೆ ಆಗಮಿಸದ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ಬೆಳಿಗ್ಗೆ 7.45 ಕ್ಕೆ ಶಾಲೆಗೆ ಭೇಟಿ ನೀಡಿದ್ದು, ಗೇಟ್ ಬಳಿ ನಿಂತಿದ್ದಾರೆ. 8.20ಕ್ಕೆ ಆಗಮಿಸಿದ ಶಿಕ್ಷಕರೊಬ್ಬರು ಗೇಟ್ ತೆರೆಯುವುದು ನೋಡಿ ಯಾರಪ್ಪ ನೀನು? ಎಂದು ಕೇಳಿದಾಗ ‘ನಾನು ಶಿಕ್ಷಕ ಸರ್' ಎಂದು ಉತ್ತರಿಸಿದ್ದಾರೆ. ‘ಈವತ್ತು ಶನಿವಾರ ಬೆಳಿಗ್ಗೆ 7.45ಕ್ಕೆ ಶಾಲೆಯಲ್ಲಿರಬೇಕು. ಪ್ರಾರ್ಥನೆ ಮುಗಿಸಿ 8ಕ್ಕೆ ತರಗತಿ ನಡೆಯಬೇಕು. ನೀವು 8.20ಕ್ಕೆ ಆಗಮಿಸಿದರೆ ಮಕ್ಕಳು ಯಾವಾಗ ಬರಬೇಕು. ನೋಡಿ ಶಾಲೆಯಲ್ಲಿ ಮಕ್ಕಳೇ ಇಲ್ಲ’ ಎಂದು ಗದರಿದರು. ಮುಖ್ಯ ಶಿಕ್ಷಕರೆಲ್ಲಿ ಎಂದು ಕೇಳಿದಾಗ ಅವರು ಲೀವ್ ಹಾಕಿದ್ದಾರೆ ಎಂದು ಉತ್ತರಿಸಿದರು. ಶಾಲೆಯಲ್ಲಿ ಲೀವ್ ಲೆಟರ್ ಇಲ್ಲ. ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿದರೆ ಅವರು ಕಚೇರಿ ಕೆಲಸದ ಮೇಲಿದ್ದೇನೆ ಎಂದು ಉತ್ತರಿಸಿದ್ದಾರೆ. ಈ ಕುರಿತು ಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ವರದಿ ಸಲ್ಲಿಸಿದ್ದೇವೆ ಎಂದರು. ಗ್ರಾಮಸ್ಥ ವಕೀಲ ಮಹೇಂದ್ರ ಸಿಂಗೆ ಮತ್ತಿರರು ಇದ್ದರು.

ನಂತರ ಮರಗುತ್ತಿ ಕ್ರಾಸ್ನಲ್ಲಿರುವ ಸರ್ಕಾರದ ಅನುದಾನಿತ ಆನಂದ ಪ್ರೌಢ ಶಾಲೆಗೆ ಭೇಟಿ ನೀಡಿದ್ದು ಈ ಶಾಲೆಯವರು ಅನಧಿಕೃತ ವಾಗಿ ರಜೆ ನೀಡಿದ್ದು ಇದನ್ನು ಸಹ ವರದಿ ಮಾಡಲಾಗಿದೆ. ಡೊಂಗರಗಾಂವದಲ್ಲಿ ಸರ್ಕಾರದ ಅನುದಾನಿತ ಮಹಾತ್ಮ ಬಸವೇಶ್ವರ ಶಾಲೆಗೆ ಭೇಟಿ ನೀಡಿದ್ದು. ಈ ಶಾಲೆ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿತ್ತು. ಸಮರ್ಪಕ ಬಿಸಿಯೂಟ ವ್ಯವಸ್ಥೆ ಇಲ್ಲ. ಮೊಟ್ಟೆ ಕೊಡುತ್ತಿಲ್ಲ ಎಂದು ತಿಳಿದು ಬಂದಿದ್ದು ಮುಖ್ಯ ಶಿಕ್ಷಕರ ವಿರುದ್ಧ ಕ್ರಮಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಕಲಮೂಡ ಮತ್ತಿತರ ಕಡೆ ಭೇಟಿ ನೀಡಿದರು.

ಕಲಬುರಗಿ ತಾಲ್ಲೂಕು ಪಂಚಾಯಿತಿ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಚಂದ್ರಕಾಂತ ಕಿಣಗಿ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.