ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ದಂಧೆ ತಡೆಗೆ ತಂಡ ರಚನೆ

Last Updated 5 ಡಿಸೆಂಬರ್ 2021, 5:24 IST
ಅಕ್ಷರ ಗಾತ್ರ

ಚಿಂಚೋಳಿ: ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಲು ತಾಲ್ಲೂಕು ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಸೇಡಂ ಉಪ ವಿಭಾಗಾಧಿಕಾರಿ ಸುರೇಖಾ ಕಿರಣಗಿ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ.

ಡಿವೈಎಸ್‌ಪಿ, ಲೋಕೋಪಯೋಗಿ, ಜಲ ಸಂಪನ್ಮೂಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತಾ.ಪಂ. ಇಒ, ಮೋಟಾರ್ ನಿರೀಕ್ಷಕರು (ಸಾರಿಗೆ ಕಚೇರಿ), ಸಹಾಯಕ ಪರಿಸರ ಅಧಿಕಾರಿ ಹಾಗೂ ಪಿಡಿಒ ಸದಸ್ಯರಾಗಿದ್ದಾರೆ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿ ತಹಶೀಲ್ದಾರ ಅಂಜುಮ ತಬಸ್ಸುಮ್ ತಿಳಿಸಿದ್ದಾರೆ.

ವಾರದ ಏಳು ದಿನವೂ ಗಸ್ತು ನಡೆಸಲು ವಿವಿಧ ಇಲಾಖೆಗಳ ಅಧಿಕಾರಿಗಳ ತಂಡದ ನಿಯೋಜನೆ ಮಾಡಲಾಗಿದೆ.

ಟಿಪ್ಪರ್ ಜಪ್ತಿ; ಪೊಲೀಸರ ಅಸಹಕಾರಕ್ಕೆ ಅಸಮಾಧಾನ: ಈಚೆಗೆ ಅಕ್ರಮವಾಗಿ ರಾತ್ರಿ 9.50ಕ್ಕೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಜಪ್ತಿ ಮಾಡಿದ ತಹಶೀಲ್ದಾರ ಅಂಜುಮ ತಬಸ್ಸುಮ ಅವರು ಚಾಲಕ ಮತ್ತು ಟಿಪ್ಪರ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಉಪ ವಿಭಾಗಾಧಿಕಾರಿಗಳು ತಂಡ ರಚನೆ ಮಾಡಿದ್ದರಿಂದ ನಾನು ಮರಳು ನಿಕ್ಷೇಪ ಗುರುತಿಸಿದ ಸ್ಥಳಕ್ಕೆ ತೆರಳುವಾಗ ಟಿಪ್ಪರ್ ಎದುರಿಗೆ ಬಂದಿದೆ. ದಾಖಲೆ ಪರಿಶೀಲಿಸಿದರೆ ರಾಜಸ್ವ ಪಾವತಿಸಿದ ರಸೀದಿ ಸಮಯ ಮುಗಿದಿತ್ತು. ಸುಲೇಪೇಟ ಠಾಣೆಗೆ ದೂರು ನೀಡಿದ್ದೇನೆ. ಆದರೆ ನನಗೆ ಈ ಪ್ರಕರಣದಲ್ಲಿ ಪೊಲೀಸರು ಸೂಕ್ತ ಭದ್ರತೆ ನೀಡಿಲ್ಲ ಎಂದು ಅಂಜುಮ ತಬಸ್ಸುಮ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT