ಕಲಬುರಗಿ: ‘ಜಿಲ್ಲೆಯಲ್ಲಿ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಗ್ರಾಹಕರು ಭಯ ಪಡುವ ಅಗತ್ಯವಿಲ್ಲ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮುನಾವರ್ ದೌಲಾ ಹೇಳಿದ್ದಾರೆ.

‘ಜಿಲ್ಲೆಯಲ್ಲಿ ಶುಕ್ರವಾರ ಐಒಸಿಎಲ್, ಬಿಪಿಸಿಎಲ್, ಎಚ್ಪಿಸಿಎಲ್ ಕಂಪನಿಗಳ 46 ಏಜೆನ್ಸಿಗಳ ಮೂಲಕ ಶುಕ್ರವಾರ 12 ಸಾವಿರದಷ್ಟು ಗೃಹ ಬಳಕೆಯ ಸಿಲಿಂಡರ್ಗಳನ್ನು ಗ್ರಾಹಕರಿಗೆ ಪೂರೈಸಲಾಗಿದೆ. ಶುಕ್ರವಾರದ ದಿನದ ಅಂತ್ಯಕ್ಕೆ ಇನ್ನೂ 13,270 ಗೃಹ ಬಳಕೆಯ ಸಿಲಿಂಡರ್ಗಳ ದಾಸ್ತಾನಿದೆ. ಹೀಗಾಗಿ ಗ್ರಾಹಕರು ಆತಂಕಕ್ಕೆ ಒಳಗಾಗಬಾರದು’ ಎಂದು ಹೇಳಿದ್ದಾರೆ.

‘ಅಡುಗೆ ಅನಿಲ ಸಿಲಿಂಡರ್ಗಳ ಪೂರೈಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಕೆಲವು ಗ್ರಾಹಕರು ಬುಕಿಂಗ್ ವೇಳೆ ತಾಂತ್ರಿಕ ತೊಂದರೆ ಎದುರಿಸುತ್ತಿದ್ದಾರೆ. ಈ ತಾಂತ್ರಿಕ ಸಮಸ್ಯೆ ತಾತ್ಕಾಲಿಕವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಲೆ ಹೆಚ್ಚಳದ ಬಿಸಿ:

ವಾಣಿಜ್ಯ ಸಿಲಿಂಡರ್ಗಳ ಪೂರೈಕೆ ಜಿಲ್ಲೆಯಲ್ಲಿ ಸ್ಥಗಿತಗೊಂಡ ಬೆನ್ನಲ್ಲೆ ಕಲಬುರಗಿ ಹಲವು ಹೋಟೆಲ್ಗಳಲ್ಲಿ ಚಹಾ, ಕಾಫಿ, ತಿಂಡಿ–ತಿನಿಸುಗಳ ದರದಲ್ಲಿ ಏರಿಕೆಯಾಗಿದೆ.

ನಗರದ ಸರ್ದಾರ್ ಪಟೇಲ್ ವೃತ್ತ ಪ್ರದೇಶದಲ್ಲಿ ಹೋಟೆಲ್ವೊಂದರಲ್ಲಿ ₹15ಗೆ ಫುಲ್ ಚಹಾ, ₹20 ಫುಲ್ ಕಾಫಿ ಸಿಗುತ್ತಿತ್ತು. ಇದೀಗ ₹5 ಹೆಚ್ಚಿಸಲಾಗಿದೆ. ತಿಂಡಿಗಳ ದರವನ್ನೂ ತಲಾ ₹5ರಿಂದ ₹10 ತನಕ ಹೆಚ್ಚಿಸಲಾಗಿದೆ.

ಪಿಡಿಎ ಎಂಜಿನಿಯರಿಂಗ್ ಕಾಲೇಜು ರಸ್ತೆಯಲ್ಲಿ ಚಹಾ ಮಾರುವ ಬೀದಿ ಬದಿ ವ್ಯಾಪಾರಿ ₹7ಕ್ಕೆ ಹಾಫ್ ಚಹಾ ಕೊಡುತ್ತಿದ್ದ. ಇದೀಗ ಹಾಫ್ ಚಹಾ ದರವನ್ನು ₹10ಕ್ಕೆ ಹೆಚ್ಚಿಸಿದ್ದು ಕಂಡುಬಂತು.

ಅರಿವು ಮೂಡಿಸಿದರೂ ತಗ್ಗದ ಆತಂಕ

‘ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ಗಳ ಕೊರತೆ ಇಲ್ಲ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು’ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ. ಆದರೂ ಜನರು ಆತಂಕ ಕಡಿಮೆ ಆಗಿಲ್ಲ. ಸಿಲಿಂಡರ್ ಬುಕಿಂಗ್ ಮಾಡಲು ಬುಕ್ ಮಾಡಿದ ಸಿಲಿಂಡರ್ ಯಾವಾಗ ಬರುತ್ತೆ ಎಂದು ವಿಚಾರಿಸಲು ಗುರುವಾರವೂ ಗ್ರಾಹಕರು ಸಿಲಿಂಡರ್ ಪೂರೈಕೆ ಏಜೆನ್ಸಿಗಳಿಗೆ ಎಡತಾಕಿದ ನೋಟ ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.