ಮೂವರು ಅಂತರರಾಜ್ಯ ಕಳ್ಳರ ಬಂಧನ: ಅರ್ಧ ಕೆ.ಜಿ. ಚಿನ್ನಾಭರಣ ವಶ

7

ಮೂವರು ಅಂತರರಾಜ್ಯ ಕಳ್ಳರ ಬಂಧನ: ಅರ್ಧ ಕೆ.ಜಿ. ಚಿನ್ನಾಭರಣ ವಶ

Published:
Updated:
Deccan Herald

ಕಲಬುರ್ಗಿ: ನಗರ ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಮೂರು ಜನ ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಪೊಲೀಸರು, ಅವರಿಂದ ಬರೋಬ್ಬರಿ ಅರ್ಧ ಕೆ.ಜಿ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಸೂಪರ್ ಮಾರ್ಕೆಟ್ ಪ್ರದೇಶದ ನಿವಾಸಿಗಳಾದ ಶಿಕಾರಿ ಮದಲೆತಿ ಚವಾಣ್ ಅಲಿಯಾಸ್ ಮದನ ಶಿಕಾರಿ ಸರದಾರ, ಶಿಕಾರಿ ಸಂಧು ಅಲಿಯಾಸ್ ಸಪ್ರು ಶಿಕಾರಿ ಪೆದ್ದ ಗೋಪಾಲ, ಶಿಕಾರಿ ಸರದಾರ ಶಂಕರ ಅಲಿಯಾಸ್ ಕಲ್ಯಾ ಚವಾಣ್ ಬಂಧಿತರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ‘ನಗರದ ರೇವಣಸಿದ್ದೇಶ್ವರ ಕಾಲೊನಿಯ ಧನಂಜಯ ಸಂಗಣ್ಣ ಬಿರಾದಾರ ಎಂಬುವರ ಮನೆಯಲ್ಲಿ ಈಚೆಗೆ ಕಳ್ಳತನ ನಡೆದಿತ್ತು. ಮನೆಯ ಬೀಗ ಮುರಿದ ಕಳ್ಳರು ₹3.50 ಲಕ್ಷ ಮೌಲ್ಯದ 140 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಮೂವರು ಆರೋಪಿಗಳು ಕೃತ್ಯ ಎಸಗಿರುವುದು ಕಂಡು ಬಂತು. ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ’ ಎಂದರು.

‘ಶಿಕಾರಿ ಚವಾಣ್ ಮತ್ತು ಶಿಕಾರಿ ಸಂಧು ಅವರು ಡಬಾರಾಬಾದ್ ಕ್ರಾಸ್, ರೇವಣಸಿದ್ದೇಶ್ವರ ಕಾಲೊನಿಯಲ್ಲಿ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಪ್ರಕರಣಗಳಲ್ಲಿ ಅವರಿಂದ 40 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, ಅವರನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿದರು.

‘ಶಿಕಾರಿ ಸರದಾರ ತಾನೊಬ್ಬನೇ ಜೇವರ್ಗಿ, ನಗರದ ಆರ್‌ಟಿಒ ಕಚೇರಿ, ಡಬರಾಬಾದ್ ಕ್ರಾಸ್‌ನ ಮನೆಗಳಲ್ಲಿ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಈತನಿಂದ 500 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಡಿವೈಎಸ್‌ಪಿ ಎಸ್‌.ಎಸ್.ಹುಲ್ಲೂರ, ಇನ್‌ಸ್ಪೆಕ್ಟರ್ ರಾಘವೇಂದ್ರ, ಪಿಎಸ್‌ಐ ಚಂದ್ರಶೇಖರ ತಿಗಡಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !