ಶುಕ್ರವಾರ, ಮಾರ್ಚ್ 31, 2023
25 °C
ಮುದವಾಳ (ಕೆ) ಕ್ರಾಸ್ ಹತ್ತಿರ ಸ್ವಾಗತ ಕಮಾನಿಗೆ ಕಾರು ಡಿಕ್ಕಿ

ತಾಯಿ ಮಗ ಸೇರಿ ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ತಾಲ್ಲೂಕಿನ ಮುದವಾಳ (ಕೆ) ಕ್ರಾಸ್ ಹತ್ತಿರ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದು, ಒಬ್ಬರಿಗೆ ಗಂಭೀರ ಗಾಯವಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರದಿಂದ ಕಲಬುರ್ಗಿ ನಗರಕ್ಕೆ ತೆರಳುತ್ತಿದ್ದಾಗ ಯಾದಗಿರಿ ಜಿಲ್ಲೆ ಸರಹದ್ದು ಮುಗಿದ ನಂತರ ಕಲಬುರ್ಗಿ ಜಿಲ್ಲೆಗೆ ಸ್ವಾಗತ ಕೋರುವ ಕಮಾನಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನ ಚಾಲಕ ರಮೇಶ ಹಣಮಂತರಾವ್ (40), ಅನಿತಾ  ರಾಜಲಬಂಡಾ (42), ಅನಿತಾ ಪುತ್ರ ಹೇಮಂತ (18) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅನಿತಾ ಪತಿ ಸಂತೋಷಕುಮಾರ ರಾಜಲಬಂಡಾ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತೋಷಕುಮಾರ ಅವರು ಸುರಪುರ ತಾಲ್ಲೂಕಿನ ಪೇಠ ಅಮ್ಮಾಪುರ ಗ್ರಾಮದ ಸಗರನಾಡು ಅನುದಾನಿತ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪಘಾತಕ್ಕೀಡಾದವರು ಸುರಪುರ ಪಟ್ಟಣದ ಜಲಾಲ ಮೊಹಲ್ಲಾ ನಿವಾಸಿಗಳು. ಪುತ್ರ ಹೇಮಂತ ಅವರ ಪರೀಕ್ಷೆ ಕಲಬುರ್ಗಿಯಲ್ಲಿ ಇದ್ದುದರಿಂದ ಕಾರಿನಲ್ಲಿ ಸುರಪುರದಿಂದ ಕಲಬುರ್ಗಿಗೆ ಬರುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು