ಶನಿವಾರ, ಅಕ್ಟೋಬರ್ 19, 2019
28 °C

ರೈಲು ಮಾರ್ಗ ಸುಗಮ: ಸಂಚಾರ ಆರಂಭ

Published:
Updated:
Prajavani

ಕಮಲಾಪುರ: ಮರಗುತ್ತಿ ರೈಲು ಸುರಂಗ ಮಾರ್ಗದ ಬಳಿ ಹಳಿ ಮೇಲೆ ಬಿದ್ದ ಗೋಡೆಯನ್ನು ತೆರವುಗೊಳಿಸಲಾಗಿದ್ದು ಸೋಮವಾರ ಸಂಜೆಯಿಂದಲೇ ರೈಲು ಸಂಚಾರ ಆರಂಭವಾಗಿದೆ ಎಂದು ಸಿಬ್ಬಂದಿ ಪ್ರಶಾಂತ ತಿಳಿಸಿದ್ದಾರೆ.

ಮರಗುತ್ತಿ ಬಳಿ ಶನಿವಾರ, ಭಾನುವಾರ ಸುರಿದ ಮಳೆಗೆ ಸುರಂಗ ಮಾರ್ಗದ ಕಲಬುರ್ಗಿ ಕಡೆಗಿನ ಬಲಗೋಡೆ ಕುಸಿದಿತ್ತು. ಬೀದರ್‌– ಕಲಬುರ್ಗಿ ರೈಲು ಸಂಚಾರವನ್ನು ಸೋಮವಾರ ಬೆಳಿಗ್ಗೆ ಸ್ಥಗಿತಗೊಳಿಸಲಾಗಿತ್ತು.

ಸಿಬ್ಬಂದಿ ಹಳಿ ಮೇಲಿನ ಕಲ್ಲು ಮಣ್ಣು ತೆರವುಗೊಳಿಸಿ ಸದ್ಯ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸುರಂಗ ಮಾರ್ಗದ ಮೇಲಿನ ಕಲ್ಲಿನ ಗೋಡೆಯನ್ನು ಸಂಪೂರ್ಣ ತೆರವುಗೊಳಿಸಿ ಕಾಂಕ್ರೀಟ್‌ ಗೋಡೆ ನಿರ್ಮಿಸಲು ಮತ್ತು  ಗುಡ್ಡದ ಮೇಲಿನಿಂದ ಹರಿದುವ ನೀರು ಮೇಲಿಂದಲೇ ಹೊರಹೋಗುವಂತೆ ದೊಡ್ಡ ನಾಲೆ ನಿರ್ಮಿಸಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

Post Comments (+)