ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿಯದ 4,000 ಬಸ್‌ಗಳು: ಖಾಸಗಿ ಬಸ್ ಚಾಲಕರಿಂದ ಪ್ರಯಾಣಿಕರ ಸುಲಿಗೆ

ಮೂರನೇ ದಿನವೂ ಮುಷ್ಕರ ಬಿಗಿ; ಉಪವಾಸ ಸತ್ಯಾಗ್ರಹ ಆರಂಭಿಸಿದ ಸಿಬ್ಬಂದಿ
Last Updated 13 ಡಿಸೆಂಬರ್ 2020, 7:22 IST
ಅಕ್ಷರ ಗಾತ್ರ
ADVERTISEMENT
"ಕಲಬುರ್ಗಿ ಬಸ್ ನಿಲ್ದಾಣದಲ್ಲಿ ಭಾನುವಾರ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರು"

ಕಲಬುರ್ಗಿ: ಸಾರಿಗೆ ಸಂಸ್ಥೆ ಸಿಬ್ಬಂದಿಯನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನವಾದ ಭಾನುವಾರವೂ ಮುಂದುವರಿದಿದೆ.

ಮೂರನೇ ದಿನವೂ ಯಾವುದೇ ಬಸ್‌ ನಿಲ್ದಾಣದ ಹೊರಗೆ ಕಾಲಿಡಲಿಲ್ಲ. ಪ್ರಯಾಣಿಕರಿಗೆ ಪರದಾಟ ತಪ್ಪಲಿಲ್ಲ.

ಬೆಳಿಗ್ಗೆ 8ರಿಂದಲೇ ಇಲ್ಲಿನ ಬಸ್ ನಿಲ್ದಾಣದಲ್ಲಿ ಚಾಲಕರು, ನಿರ್ವಾಹಕರು, ಮಾಕ್ಯಾನಿಕ್ ಸಿಬ್ಬಂದಿ ಸೇರಿಕೊಂಡು ಉಪವಾಸ ಸತ್ಯಾಗ್ರಹ ಆರಂಭಿಸಿದರು.

₹ 2 ಕೋಟಿಗೂ ಹೆಚ್ಚು ಆದಾಯ ಕಡಿತ ಸಾಧ್ಯತೆ:
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಟ್ಟು 19,000 ನೌಕರರು ಇದ್ದು, 4,600 ಬಸ್‌ಗಳಿವೆ. ಈಗ 4,000 ಬಸ್‌ ನಿಲ್ಲಿಸಲಾಗಿದೆ. ಎಲ್ಲ ನೌಕರರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಭಾನುವಾರ ಒಂದೇ ದಿನಕ್ಕೆ ಸಂಸ್ಥೆಗೆ ಬರಬೇಕಿದ್ದ ₹ 2 ಕೋಟಿಗೂ ಅಧಿಕ ಆದಾಯಕ್ಕೆ ಕಡಿತ ಬಿದ್ದಿದೆ.

ಅನಿವಾರ್ಯ ಹಾಗೂ ತುರ್ತು ಸಂದರ್ಭಗಳ ನಿರ್ವಹಣೆಗಾಗಿ ಕೆಲವು ಬಸ್‌ಗಳನ್ನು ಓಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT