ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಧನ್ವಂತರಿ ಆಸ್ಪತ್ರೆಯಲ್ಲಿ 12 ಕೋವಿಡ್‌ ವಾರ್ಡ್‌

Last Updated 23 ಜುಲೈ 2020, 15:32 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಧನ್ವಂತರಿ ಆಸ್ಪತ್ರೆಯಲ್ಲಿ ಕೂಡ ಕೋವಿಡ್‌ ಐಸೋಲೇಷನ್‌ ವಾರ್ಡ್‌ ತೆರೆಯಲಾಗಿದ್ದು, 12 ವಾರ್ಡ್‌ಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಆಸ್ಪತ್ರೆಗೆ ಅನುಮತಿ ಸಿಕ್ಕ ಕೇವಲ ಆರು ತಾಸಿನಲ್ಲಿ ಎಲ್ಲ ವಾರ್ಡ್‌ಗಳೂ ಭರ್ತಿಯಾಗಿವೆ.

ಈ ಆಸ್ಪತ್ರೆಯಲ್ಲಿ ಒಟ್ಟು 60 ಬೆಡ್‌ಗಳಿವೆ. ಅದರಲ್ಲಿ 12 ಕೋವಿಡ್‌ ವಾರ್ಡ್‌ಗಳಲ್ಲಿ ಆರು ವಿಷಮಶೀತ ಜ್ವರ (ಐಎಲ್‌ಐ) ಇನ್ನಾರು ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಐ) ಇರುವ ರೋಗಿಗಳಿಗೆ ಮೀಸಲಿಡಲಾಗಿದೆ. ಒಂದು ವೆಂಟಿಲೇಟರ್‌, ಒಂದು ‘ಹೈ ಫ್ಲೋ ನೇಜಲ್‌ ಆಕ್ಸಿಜನ್ ಥೆರಪಿ (ಎಚ್‌ಎಫ್‌ಎನ್‌ಒಟಿ)‌’ ಮಷಿನ್‌ ಈಗಾಗಲೇ ಇವೆ. ಇನ್ನೂ ಎರಡು ಎಚ್ಎಫ್‌ಎನ್‌ಟಿ ಮಷಿನ್‌ಗಳನ್ನು ಎರಡು ದಿನಗಳಲ್ಲಿ ತರಿಸಿಕೊಳ್ಳಲಾಗುತ್ತಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ರಾಹುಲ್‌ ಮಂದಕನಳ್ಳಿ ತಿಳಿಸಿದ್ದಾರೆ.

ಐಎಲ್‌ಐ ಸ್ಥಿತಿ ತಲುಪಿದ ಸೋಂಕಿತರನ್ನು ಐಸೋಲೇಷನ್‌ ವಾರ್ಡ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಉಸಿರಾಟದ ತೊಂದರೆ ಇರುವವರಿಗೆ ‘ಹೈ ರಿಸ್ಕ್‌’ ಇರುವ ಕಾರಣ ಹೈ ಫ್ಲೋ ನೇಜಲ್‌ ಆಕ್ಸಿಜನ್ ಥೆರಪಿ ನೀಡಲಾಗುತ್ತದೆ. ಅಗತ್ಯ ಔಷಧಗಳನ್ನು ಆಸ್ಪತ್ರೆಯಿಂದಲೇ ತರಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಬಿಲ್‌ ವ್ಯವಸ್ಥೆ ಹೇಗೆ?
‘ಧನ್ವಂತರಿ ಆಸ್ಪತ್ರೆಯಲ್ಲಿ ಶೇ 50ರಷ್ಟು ಕೋವಿಡ್‌ ಬೆಡ್‌ಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಳಿಹಿಸುವ ರೋಗಿಗಳಿಗೆ ಮೀಸಲಿಡಲಾಗಿದೆ. ಇನ್ನರ್ಧ ನೇರವಾಗಿ ನಾವೇ ಅಡ್ಮಿಟ್‌ ಮಾಡಿಕೊಳ್ಳಬಹುದು. ಜಿಮ್ಸ್‌ ಅಥವಾ ಇಎಸ್‌ಐನಿಂದ ಕಳುಹಿಸುವ ಸೋಂಕಿತರಿಗೆ ಆಯುಷ್ಮಾನ್‌ ಭಾರತ್‌– ಆರೋಗ್ಯ ಕರ್ನಾಟಕ ಯೋಜನೆ ಅಡಿ ಉಚಿತ ಚಿಕಿತ್ಸೆ ನೀಡುತ್ತೇವೆ. ನೇರವಾಗಿ ನಮ್ಮಲ್ಲೇ ದಾಖಲಾಗುವವರು ಶುಲ್ಕ ಭರಿಸಬೇಕಾಗುತ್ತದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT