ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ನಕ್ಷತ್ರ ಆಮೆ ಮಾರಲು ಯತ್ನ; ಬಂಧನ

Last Updated 6 ಫೆಬ್ರುವರಿ 2021, 2:46 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ರೈಲು ನಿಲ್ದಾಣದ ಬಳಿ ನಕ್ಷತ್ರ ಆಮೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ವಿದ್ಯಾನಂದ ಮತ್ತು ಜಿತೇಂದ್ರ ಬಂಧಿತರು. ಅವರ ಬಳಿ ಇದ್ದ ಜೀವಂತ ನಕ್ಷತ್ರ ಆಮೆಯನ್ನು ವಶಕ್ಕೆ ಪಡೆಯಲಾಗಿದೆ. ಈ ಆಮೆ ಅತ್ಯಂತ ಅಪರೂಪದ್ದಾಗಿದ್ದು, ಇದರ ಸಂತತಿ ಅಳಿವಿನ ಅಂಚಿಗೆ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳಿಗೆ ಭಾರಿ ಬೇಡಿಕೆ ಇದೆ. ಆರೋಪಿಗಳಿಗೆ ಇದು ಎಲ್ಲಿ ಸಿಕ್ಕಿದೆ ಎಂಬ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಅರಣ್ಯಾಧಿಕಾರಿಗಳು
ತಿಳಿಸಿದ್ದಾರೆ.

ಇವರು ನಕ್ಷತ್ರ ಆಮೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಆದರಿಸಿ, ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಮಾರ್ಗದರ್ಶದಲ್ಲಿ, ವನ್ಯಜೀವಿ ಅಪರಾಧ ತಡೆ ಕಚೇರಿ ತಂಡದೊಂದಿಗೆ ವಲಯ ಅರಣ್ಯಾಧಿಕಾರಿ ರಮೇಶ ಮಾಳಾ ನೇತೃತ್ವದಲ್ಲಿ ರೇವಣಸಿದ್ದಪ್ಪ ತಾವರಖೇಡ, ಸಿದ್ಧರಾಮೇಶ್ವರ ನಾಲತವಾಡ, ಸುರೇಶ ಬೆಣ್ಣೂರ ದಾಳಿ ನಡೆಸಿ ಬಂಧಿಸಿದರು. ನಕ್ಷತ್ರ ಆಮೆ ವಪಡಿಸಿಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT