ಸೋಮವಾರ, ಜನವರಿ 20, 2020
20 °C

ಉಡಚಾಣ: ಉಚಿತ ಚಿಕಿತ್ಸಾ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ‘ಬದಲಾದ ಜೀವನಶೈಲಿ ಮತ್ತು ಒತ್ತಡದ ಬದುಕಿನ ಇಂದಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚುತ್ತಿದೆ. ಇದರ ನಿವಾರಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿ’  ಎಂದು ಮಾಶಾಳ ಜಿ.ಪಂ ಸದಸ್ಯ ಅರುಣಕುಮಾರ ಎಂ.ಪಾಟೀಲ್ ತಿಳಿಸಿದರು.

ತಾಲ್ಲೂಕಿನ ಉಡಚಾಣ ಗ್ರಾಮದ ಶಂಕರಲಿಂಗೇಶ್ವರ ಮಠದ ಆವರಣದಲ್ಲಿ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆ,  ಹೈ.ಕ.ಶಿ ಸಂಸ್ಥೆ ಸಹಕಾರದಲ್ಲಿ ಬುಧವಾರ ಏರ್ಪಡಿಸಿದ ಬಡ ಉಚಿತ ನೇತ್ರ, ದಂತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದ ನೇತೃತ್ವವಹಿಸಿ ಅವರು ಮಾತನಾಡಿದರು.

ಶಾಂತಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗ್ರಾ.ಪಂ ಅಧ್ಯಕ್ಷೆ ಕಾಶಿಬಾಯಿ ಗಿರಣಿ ಅಧ್ಯಕ್ಷತೆ ವಹಿಸಿದ್ದರು. 200 ಜನ ರೋಗಿಗಳಿಗೆ ಸ್ಥಳದಲ್ಲೇ ಉಚಿತ ಚಿಕಿತ್ಸೆ ನೀಡಿ ಹೆಚ್ಚುವರಿ ಚಿಕಿತ್ಸೆ ಅಗತ್ಯ ಇದ್ದ 30 ಜನ ರೋಗಿಗಳನ್ನು ಕಲಬುರ್ಗಿಯ ಬಸವೇಶ್ವರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ಡಾ.ವಿಶ್ವನಾಥ ರೆಡ್ಡಿ ನೇತೃತ್ವದ ತಂಡದಲ್ಲಿ ಮಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜು ಹಾಗೂ ಎಸ್. ನಿಜಲಿಂಗಪ್ಪ ಕಾಲೇಜಿನಿಂದ ಆಗಮಿಸಿದ ಸುಮಾರು 20 ಜನ ವೈದ್ಯಾಧಿಕಾರಿಗಳು ಉಚಿತ ಚಿಕಿತ್ಸೆ ನೀಡಿದರು.

ನೇತ್ರ ತಜ್ಞೆ ಡಾ.ಕವಿತಾ ಸಲಗರ, ದಂತ ತಜ್ಞ ಡಾ.ನವೀನ ಕಾರಬಾರಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ರತ್ನಾಕರ ತೋರಣ, ಡಾ.ಸಮೀರ್ ಬೇಗ್, ಗ್ರಾ.ಪಂ ಕಾರ್ಯದರ್ಶಿ ತ್ರಿಮೂರ್ತಿ ಹೊಸೂರ, ಮುಖಂಡರಾದ ಮಹಾದೇವಗೌಡ ಕರೂಟಿ, ಶರಣು ಪಡಶೆಟ್ಟಿ, ಶಿವಶರಣ ನೀಲಂಗೆ, ಬಾಬುರಾವ ದೇವನಂಗಾಂವ, ದಿಲೀಪ ಕಳಸಿ, ಬಸವರಾಜ ಬುಶೆಟ್ಟಿ, ದತ್ತು ಬಂಡಗಾರ ಇದ್ದರು.

ಉಡಚಾಣ, ಶಿವೂರ, ಹಿರಿಯಾಳ, ಕರಜಗಿ, ಕುಡಿಗನೂರ, ಉಡಚಾಣ ಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು. ಗ್ರಾ.ಪಂ ಮಾಜಿ ಸದಸ್ಯ ಅನೀಲಕುಮಾರ ಕಮರೆಡ್ಡಿ ವಂದಿಸಿದರು.

ಪ್ರತಿಕ್ರಿಯಿಸಿ (+)