ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವತಂತ್ರ ಆಲೋಚನಾ ಶಕ್ತಿ ಬೆಳೆಸಿಳ್ಳಿ; ವಿದ್ಯಾರ್ಥಿಗಳಿಗೆ ಸಲಹೆ

Last Updated 7 ಏಪ್ರಿಲ್ 2022, 4:04 IST
ಅಕ್ಷರ ಗಾತ್ರ

ಆಳಂದ: ‘ಯುವಕರು ಜ್ಞಾನ ಸಂಪಾದನೆ ಜತೆಗೆ ಸ್ವತಂತ್ರ ಆಲೋಚನಾ ಶಕ್ತಿ ಬೆಳೆಸಿಕೊಳ್ಳಬೇಕು’ ಎಂದು ಗುಲಬರ್ಗಾ ವಿಶ್ವ ವಿದ್ಯಾಲಯದ ಕುಲಸಚಿವ ಶರಣಬಸಪ್ಪ ಕೊಟ್ಟೆಪ್ಪಗೋಳ ತಿಳಿಸಿದರು.

ಪಟ್ಟಣದ ಎ.ವಿ.ಪಾಟೀಲ ಪದವಿ ಕಾಲೇಜಿನಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಯಲದ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ, ಎಕಾಂ, ಎಂ.ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಳಂದ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ.ಎಂ.ಎಸ್.ಪಾಸೋಡಿ ಮಾತನಾಡಿದರು.

ಪ್ರೋ.ರಮೇಶ ರಾಠೋಡ, ಪ್ರೋ.ಕೆ.ಲಿಂಗಪ್ಪ , ಎ.ವಿ.ಪಾಟೀಲ ಕಾಲೇಜಿನ ಪ್ರಾಂಶುಪಾಲ ಪ್ರೋ.ಶರಣಬಸಪ್ಪ ಕಮ್ಮಾರ ಮಾತನಾಡಿದರು.

ಉಪನ್ಯಾಸಕ ಅಂಬರೀಷ ಕುಂಬಾರ, ಪ್ರತಿಭಾ ರಂಗದಾಳೆ, ಶಾಂತಕುಮಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT