ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಸಮಾನ ಹಂಚಿಕೆಗೆ ಆದ್ಯತೆ

ಶಹಾಬಾದ್: ವೈಯಕ್ತಿಕ ಫಲಾನುಭವಿಗಳ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆ
Last Updated 28 ಅಕ್ಟೋಬರ್ 2022, 6:50 IST
ಅಕ್ಷರ ಗಾತ್ರ

ಶಹಾಬಾದ್: ನಗರಸಭೆಯ ಸಭಾಂಗಣ ದಲ್ಲಿ ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆ ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಈ ವೇಳೆ ನಗರೋತ್ಥಾನ ಹಂತ-4ರ ಯೋಜನೆಯಡಿಯಲ್ಲಿ ಶೇ 24.10, ಶೇ 7.25 ಹಾಗೂ ಶೇ 5 ಅನುದಾನ ಹಂಚಿಕೆಯಲ್ಲಿ ವೈಯಕ್ತಿಕ ಫಲಾನುಭವಿಗಳ ಆಯ್ಕೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ನಗರಸಭೆ ಪೌರಾಯುಕ್ತ ಅಶೋಕ ಬಿಲಗುಂದಿ ಮಾತನಾಡಿ, ನಗರೋತ್ಥಾನ 4ರ ಹಂತದಲ್ಲಿ ಶೇ 20ನಲ್ಲಿ ಪೌರ ಕಾರ್ಮಿಕರ ವಸತಿ ಸೌಲಭ್ಯಕ್ಕಾಗಿ ₹85.46 ಲಕ್ಷ, ಪೌರಕಾರ್ಮಿಕರ ಸುರಕ್ಷತಾ ಪರಿಕರಗಳಿಗಾಗಿ ₹10 ಲಕ್ಷ, ಪೌರಕಾರ್ಮಿಕರ ಆರೋಗ್ಯ ತಪಾಸಣೆಗಾಗಿ ₹10 ಲಕ್ಷ, ಆರೋಗ್ಯ ವಿಮೆಗಾಗಿ ₹2 ಲಕ್ಷ, ಪೌರಕಾರ್ಮಿಕರ ಮಕ್ಕಳ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ₹2.47 ಲಕ್ಷ, ಪೌರ ಕಾರ್ಮಿಕರ ಶಸ್ತ್ರ ಚಿಕಿತ್ಸೆಗಾಗಿ ₹10 ಲಕ್ಷ ಅನುದಾನ ಕ್ರಿಯೋಜನೆಯಲ್ಲಿ ಮಂಜೂರಾಗಿದೆ.

ಅಲ್ಲದೇ ಶೇ 24.10ರಲ್ಲಿ ಶೇ 17.15 ಭಾಗ ₹1.96. ಕೋಟಿ ಅನುದಾನವನ್ನು ಪರಿಶಿಷ್ಟ ಜಾತಿಗೆ, ಪರಿಶಿಷ್ಟ ಪಂಗ ಡಕ್ಕೆ ಶೇ 6.95 ಅನುದಾನ ಹಂಚಿಕೆ ಮಾಡಲಾಗಿದೆ. ಶೇ 7.25 ಯೋಜ ನೆಯಡಿ ಇತರ ಬಡ ಜಾತಿ, ಜನಾಂಗ ದವರಿಗೆ ಒಟ್ಟು ₹73.95 ಲಕ್ಷ ಅನುದಾನ ಒದಗಿಸಲಾಗಿದೆ. ಶೇ 5 ಯೋಜನೆಯ ₹63.75 ಲಕ್ಷ ಅನುದಾನವನ್ನು ವಿಕಲ ಚೇತನರಿಗೆ ಮೀಸಲಾಗಿದ್ದು, ಅದರಲ್ಲಿ ತ್ರಿಚಕ್ರ ವಾಹನಕ್ಕಾಗಿ ₹40 ಲಕ್ಷ, ಅನುದಾನ ಮಂಜೂರಾಗಿದೆ. ಅದಕ್ಕೆ ಸರ್ವ ಸದಸ್ಯರು ಸರ್ವಾನುಮತದಿಂದ ಅನು ಮೋದಿಸಿದರು.

ಅಲ್ಲದೇ ನಗರಸಭೆಯ ಸದಸ್ಯ ರವಿ ರಾಠೋಡ, ನಾಗರಾಜ ಕರಣಿಕ್, ಡಾ.ಅಹ್ಮದ್ ಪಟೇಲ್ ಸೇರಿದಂತೆ ಅನೇಕರು, ಪತ್ರಕರ್ತರು ಪತ್ರಿಕಾಭವನಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು, ಭವನದ ನಿರ್ಮಾಣಕ್ಕೆ ಶರಣಬಸವೇಶ್ವರ ದೇವ ಸ್ಥಾನದ ಮುಂಭಾಗದ ಖಾಲಿ ಇರುವ ನಗರಸಭೆಯ ಸ್ಥಳವನ್ನು ನೀಡಬೇಕು. ಇಲ್ಲದಿದ್ದರೇ ಇಲ್ಲಸಲ್ಲದವರು ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ. ಪ್ರಜಾಪ್ರ ಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗದವರಿಗೆ ಪತ್ರಿಕಾ ಭವನಕ್ಕೆ ಜಾಗವನ್ನು ನಿಗದಿಗೊಳಿಸಬೇಕೆಂದು ಹೇಳಿದರು. ಅದಕ್ಕೆ ಸರ್ವ ಸದಸ್ಯರು ಒಕ್ಕೋರಲದಿಂದ ಒಪ್ಪಿಗೆ ಸೂಚಿಸಿದರು.
ಉಪಾಧ್ಯಕ್ಷೆ ಸಲೀ ಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ ಸೇರಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT