ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿವಿಧೆಡೆ ದೇವರಾಜ ಅರಸು ಜಯಂತಿ

ಶಾಲಾ–ಕಾಲೇಜುಗಳಲ್ಲಿ ಭಾವಚಿತ್ರಕ್ಕೆ ಪೂಜೆ, ಕೊಡುಗೆ ಸ್ಮರಣೆ
Published : 21 ಆಗಸ್ಟ್ 2024, 7:55 IST
Last Updated : 21 ಆಗಸ್ಟ್ 2024, 7:55 IST
ಫಾಲೋ ಮಾಡಿ
Comments

ಕಲಬುರಗಿ: ‘ಡಿ.ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರರು’ ಎಂದು ಎಂ.ಎಸ್.ಇರಾಣಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಐ.ಕೆ.ಪಾಟೀಲ ಅಭಿಪ್ರಾಯಪಟ್ಟರು.

ನಗರದ ಎಂ.ಎಸ್.ಇರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಡಿ.ದೇವರಾಜ ಅರಸು ಅವರ 109ನೇ ಜನ್ಮ‌ದಿನಾಚರಣೆ ಹಾಗೂ ಸದ್ಭಾವನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದುಳಿದವರ ಕಲ್ಯಾಣಕ್ಕಾಗಿ ಮೊದಲ ಬಾರಿಗೆ ಹಿಂದುಳಿದ ಆಯೋಗ ರಚಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಜೀತ ಪದ್ಧತಿಯನ್ನು ನಿಷೇಧಿಸಿದರು. ಸದಾ ಬಡವರ ಏಳಿಗೆಗಾಗಿ ಚಿಂತಿಸುತ್ತಿದ್ದರು. ಭಾಗ್ಯಜ್ಯೋತಿ ಯೋಜನೆಯನ್ನು ಜಾರಿಗೆ ತಂದರು ಎಂದರು.

ಉಪನ್ಯಾಸಕಿ ಕೃಷ್ಣವೇಣಿ ಪಾಟೀಲ ಮಾತನಾಡಿದರು. ಉಪನ್ಯಾಸಕಿ ಸರೋಜಾದೇವಿ ಪಾಟೀಲ ವಿದ್ಯಾರ್ಥಿಗಳಿಗೆ ಸದ್ಭಾವನಾ ಪ್ರಮಾಣವಚನ ಬೋಧಿಸಿದರು.

ಉಪನ್ಯಾಸಕರಾದ ರಾಮು ಕಟ್ಟಿಮನಿ, ಸಂಗೀತಾ ಸಡಕೀನ್, ಭಾಗ್ಯಶ್ರೀ ಬೇನೂರ ಹಾಗೂ ಅಶ್ವಿನಿ ಪಾಟೀಲ ಉಪಸ್ಥಿತರಿದ್ದರು.

ದತ್ತಾತ್ರೇಯ ವಠಾರ ನಿರೂಪಿಸಿ, ವಂದಿಸಿದರು.

ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ: ನಗರದ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯದಲ್ಲಿ ಡಿ.ದೇವರಾಜ ಅರಸು ಜಯಂತಿ ಆಚರಿಸಲಾಯಿತು.

ಪ್ರಾಚಾರ್ಯ ಮೋಹನರಾಜ ಮಾತನಾಡಿ, ‘ಅರಸು ಅವರು ಶ್ರೇಷ್ಠ ಸಮಾಜ ಸುಧಾಕರು’ ಎಂದು ಹೇಳಿದರು.

ಅವರ ಅಧಿಕಾರವಧಿಯಲ್ಲಿ ಸಮಾಜದಲ್ಲಿ ಅನೇಕ ಸುಧಾರಣೆಗಳನ್ನು ತಂದರು. ಬಡತನ ನಿರ್ಮೂಲನೆಗೆ ಆದ್ಯತೆ ನೀಡಿದರು. ಉಳುವವನಿಗೆ ಭೂಮಿ, ಹಾವನೂರು ಆಯೋಗದಂಥ ಪ್ರಮುಖ ನಿರ್ಧಾರಗಳ ಪ್ರತಿಫಲ ಇಂದಿನ ಪೀಳಿಗೆಗೆ ಸಿಗುತ್ತಿದೆ ಎಂದರು.

ಉಪನ್ಯಾಸಕರಾದ ನಯನತಾರಾ ಆಸ್ಪಲ್ಲಿ, ರಶ್ಮಿ, ಸಿಬ್ಬಂದಿ ಜ್ಯೋತಿ ಕಲ್ಲೂರ, ಸುಚೇತಾ ಜೋಗುರು, ಶರಣಮ್ಮ, ಜಯಶ್ರಿ, ಭಾಗ್ಯವತಿ, ಅಂಬಿಕಾ, ಸುನೀತಾ ಸ್ವಾಮಿ, ಸಿದ್ದಲಿಂಗಯ್ಯ ಹೊಸಮನಿ ಹಾಜರಿದ್ದರು.

ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು: ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜಯಂತಿ ಆಚರಿಸಲಾಯಿತು.

ವಿದ್ಯಾರ್ಥಿನಿ ಪ್ರಿಯಾಂಕಾ ಪಾಟೀಲ ಮಾತನಾಡಿ, ‘ಅರಸು ಅವರು ರಾಜ್ಯ ಕಂಡ ಶ್ರೇಷ್ಠ ಸಾಮಾಜಿಕ ಸುಧಾರಕರು. ಸತತ ಹತ್ತು ವರ್ಷ ಶಾಸಕರಾಗಿ ಆಯ್ಕೆಯಾಗಿದ್ದ ಅರಸು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು’ ಎಂದರು.

ಕಲಬುರಗಿ ನಗರದ ಎಂ.ಎಸ್.ಇರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಡಿ.ದೇವರಾಜ ಅರಸು ಅವರ 109ನೇಯ‌ ಜನ್ಮ‌ದಿನಾಚರಣೆ ಕಾರ್ಯಕ್ರಮ ನಡೆಯಿತು
ಕಲಬುರಗಿ ನಗರದ ಎಂ.ಎಸ್.ಇರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಡಿ.ದೇವರಾಜ ಅರಸು ಅವರ 109ನೇಯ‌ ಜನ್ಮ‌ದಿನಾಚರಣೆ ಕಾರ್ಯಕ್ರಮ ನಡೆಯಿತು
ಕಲಬುರಗಿ ನಗರದ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯದಲ್ಲಿ ಡಿ.ದೇವರಾಜ ಅರಸು ಜಯಂತಿ ಆಚರಿಸಲಾಯಿತು
ಕಲಬುರಗಿ ನಗರದ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯದಲ್ಲಿ ಡಿ.ದೇವರಾಜ ಅರಸು ಜಯಂತಿ ಆಚರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT