‘ಬುದ್ಧ, ಬಸವ ಅಂಬೇಡ್ಕರ್‌ರ ಆದರ್ಶ ಪಾಲನೆಯಿಂದ ಬದುಕು ಸಾರ್ಥಕ’

7

‘ಬುದ್ಧ, ಬಸವ ಅಂಬೇಡ್ಕರ್‌ರ ಆದರ್ಶ ಪಾಲನೆಯಿಂದ ಬದುಕು ಸಾರ್ಥಕ’

Published:
Updated:
Deccan Herald

ಕಲಬುರ್ಗಿ: ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಬದುಕು ಸಾರ್ಥಕವಾಗುತ್ತದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಸ್ಥಳೀಯ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯಿಂದ ಲಿಂ.ಲಿಂಗಣ್ಣ ಸತ್ಯಂಪೇಟೆ ಹಾಗೂ ಸಿದ್ರಾಮಪ್ಪ ಬಾಲಪ್ಪಗೋಳ ಸ್ಮರಣಾರ್ಥ ನಗರದ ಎಸ್.ಎಸ್. ತೆಗನೂರ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಸತ್ಯ ಚರಿತೆ ರಚನೆಯಲ್ಲಿ ವಚನಜ್ಯೋತಿ ಯಾತ್ರೆ’ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪತ್ರಕರ್ತ, ಸಾಹಿತಿಯಾಗಿದ್ದ ಲಿಂಗಣ್ಣ ಸತ್ಯಂಪೇಟೆ ಹಾಗೂ ಕಾಯಕಪ್ರೇಮಿ ಸಿದ್ರಾಮಪ್ಪ ಬಾಲಪ್ಪಗೋಳ ಅವರು ತಮ್ಮ ನಿಸ್ವಾರ್ಥ ಸಮಾಜಸೇವೆಯ ಮೂಲಕ ಅನುಕರಣೀಯರಾಗಿದ್ದಾರೆ ಎಂದರು.

ಅಫಜಲಪುರ ಭಾರತೀಯ ಬಸವ ಬಳಗದ ಅಮೃತರಾವ ಪಾಟೀಲ ಗುಡ್ಡೇವಾಡಿ ಮಾತನಾಡಿ, ನಡೆ-ನುಡಿ ಒಂದಾಗಿಸಿಕೊಂಡಿದ್ದ ಬಸವಾದಿ ಶರಣರ ಬದುಕು ಹಾಗೂ ಬೋಧನೆ ಇಂದಿನ ಯುವಕರಿಗೆ ಆದರ್ಶವಾಗಬೇಕಿದೆ. ಮೂಢನಂಬಿಕೆ, ಕಂದಾಚಾರಗಳಿಗೆ ಮೊರೆ ಹೋಗದೆ  ಸಾರ್ಥಕ ಬದುಕು ಸಾಗಿಸಬೇಕಿದೆ ಎಂದು ಹೇಳಿದರು.

ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಜ್ಯೋತಿ ಆರ್.ತೆಗನೂರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ತೆಗನೂರ, ಮಲ್ಲಮ್ಮ ಸಿದ್ರಾಮಪ್ಪ ಬಾಲಪ್ಪಗೋಳ, ಸಾಹಿತಿ ಶಿವರಂಜನ್ ಸತ್ಯಂಪೇಟೆ, ಅಕಾಡೆಮಿಯ ಕಾರ್ಯಾಧ್ಯಕ್ಷ ಶಿವರಾಜ ಅಂಡಗಿ, ಪರಮೇಶ್ವರ ಶಟಕಾರ, ಬಸವರಾಜ ಧೂಳಾಗುಂಡಿ, ಎಂ.ಬಿ.ಸಿಪಾಯಿ, ಸಂಗಣ್ಣ ಹೊಸಮನಿ, ಡಾ.ಅಮರೇಶ ಹಿರೇಮಠ ವೇದಿಕೆಯಲ್ಲಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !