ಭಾನುವಾರ, ಫೆಬ್ರವರಿ 28, 2021
23 °C
52 ದಿನಗಳ ತಪಸ್ಸು ಮುಗಿಸಿ ಮೈಕೊಡವಿಕೊಂಡು ರಸ್ತೆಗಿಳಿದ ವಾಹನಗಳು

ಕಲಬುರ್ಗಿ: ದಿಢೀರ್‌ ಹೆಚ್ಚಿದ ವಾಹನಗಳ ಓಡಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಒಂದೂವರೆ ತಿಂಗಳ ಹಿಂದೆ ಇದ್ದ ಕಲಬುರ್ಗಿ ನಗರದ ನೋಟ ಸೋಮವಾರ ಇರಲಿಲ್ಲ. ನಗರದ ಎಲ್ಲ ರಸ್ತೆಗಳಲ್ಲೂ ಜನ, ವಾಹನ ಓಡಾಟ ಬಿರುಸಾಗಿತ್ತು. ಬರೋಬ್ಬರಿ 52 ದಿನಗಳ ತಪಸ್ಸಿನ ನಂತರ ಎಷ್ಟೋ ವಾಹನಗಳು ದೂಳು ಕೊಡವಿಕೊಂಡು, ರಸ್ತೆಗಿಳಿದಂತೆ ಭಾಸವಾಯಿತು.

ಬಸ್‌, ಕಾರ್‌, ಆಟೊ, ಬೈಕ್‌ಗಳೇ ಹೆಚ್ಚಾಗಿ ಓಡಾಡಿದವು. ಕೇಂದ್ರ ಸರ್ಕಾರ ಮೇ 4ರಿಂದ ಲಾಕ್‌ಡೌನ್ ‌ಅನ್ನು ತುಸು ಸಡಿಲಗೊಳಿಸಿದ್ದೇ ತಡ, ಜನ ಒಮ್ಮಿಂದೊಮ್ಮೆ ಮೈ ಕೊಡವಿಕೊಂಡು ಎದ್ದರು. ತಮ್ಮತಮ್ಮ ವಾಹನಗಳನ್ನು ಹತ್ತಿ ರಸ್ತೆಗಳಲ್ಲಿ ನಿರ್ಭಯವಾಗಿ ಸಂಚರಿಸಿದರು.

ಸೋಮವಾರವೇ ಮದ್ಯ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಜತೆಗೆ, ಹೊರ ಜಿಲ್ಲೆಗಳಿಗೆ ವಲಸೆ ಹೋದ ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಮರಳಿ ಕರೆತರಲಾಯಿತು. ಇವರನ್ನು ಮನೆಗೆ, ಊರುಗಳಿಗೆ ಕರೆದೊಯ್ಯಲು ಸರ್ಕಾರಿ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಮತ್ತೆ ಕೆಲವರು ತಮ್ಮ ಬಂಧು– ಮಿತ್ರರ ಖಾಸಗಿ ವಾಹನಗಳಲ್ಲೇ ಊರಿನತ್ತ ಮರಳಿದರು. ಇದರಿಂದ ಸಹಜವಾಗಿಯೇ ವಾಹನ ದಟ್ಟಣೆ ಕಂಡುಬಂತು.

ನಗರದ ಕೋರ್ಟ್‌ ರಸ್ತೆ, ಬಸ್‌ನಿಲ್ದಾಣ ರಸ್ತೆ, ಎಂಎಸ್‌ಕೆ ಮಿಲ್‌ ಮಾರ್ಗ, ಹೊಸ ಹಾಗೂ ಹಳೆ ಜೇವರ್ಗಿ ಮಾರ್ಗ, ಸೇಡಂ ರೋಡ್‌, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ಜಗತ್‌ ಸರ್ಕಲ್‌, ಮಾರುಕಟ್ಟೆ ಸರ್ಕಲ್‌, ರಾಷ್ಟ್ರಪತಿ ಚೌಕ ಸೇರಿದಂತೆ ಎಲ್ಲ ಮುಖ್ಯರಸ್ತೆಗಳಲ್ಲೂ ವಾಹನಗಳ ಓಡಾಟ ಲವಲವಿಕೆಯಿಂದ ಕೂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು