ಹುಬ್ಬಳ್ಳಿ: ವಿಜಯಪುರ, ಬಳ್ಳಾರಿ, ಧಾರವಾಡ, ಬೆಳಗಾವಿ ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಬಿರುಸಿನ ಮಳೆ ಸುರಿಯಿತು. ಬಹುತೇಕ ಕಡೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಮಸೂತಿ ಮತ್ತು ಕುಬಕಡ್ಡಿ ಗ್ರಾಮದಲ್ಲಿ ಸಾವಿರಾರು ಬಾಳೆ ಗಿಡ ಗಳು ನೆಲಕ್ಕಚ್ಚಿದವು. ಕೊಲ್ಹಾರ ಪಟ್ಟಣದಲ್ಲಿ ಸಿಡಿಲು ಬಡಿದು ಎಮ್ಮೆಯೊಂದು ಸಾವಿಗೀಡಾದರೆ, ಹಳೇರೊಳ್ಳಿ ಗ್ರಾಮ ದಲ್ಲಿ ಬೃಹತ್ ಆಲದ ಮರ ಬಿದ್ದು 2 ಎಮ್ಮೆಗಳು ಮೃತಪಟ್ಟಿವೆ. ಹಲವು ಮನೆಗಳ ಚಾವಣಿ ಗಾಳಿಗೆ ಹಾರಿ ಹೋಗಿವೆ. ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಸೇಡಂ–ಸಿಡಿಲಿಗೆ ವ್ಯಕ್ತಿ, ಎತ್ತು ಬಲಿ: ತಾಲ್ಲೂಕಿನ ವಿವಿಧೆಡೆ ಗುರುವಾರ ಸಂಜೆ ಸಿಡಿಲು ಬಡಿದು ತಾಲ್ಲೂಕಿನ ಜಾಕನಪಲ್ಲಿ ಗ್ರಾಮದ ಆಶಪ್ಪ ಕಂಪಿನ್ (60) ಮೃತಪಟ್ಟರು. ಗ್ರಾಮದ ಮನೆಯ ದೂರದಲ್ಲಿರುವ ದೊಡ್ಡಿಯಲ್ಲಿ ಕಟ್ಟಿದ ಎತ್ತಿಗೆ ಸಿಡಿಲು ಬಡಿದಿದ್ದರಿಂದ ಎತ್ತು ಮೃತಪಟ್ಟಿದೆ. ಚಂದ್ರಪ್ಪ ಪುಲಮೋರ್ ಅವರಿಗೆ ಸೇರಿದ ಎತ್ತು ಇದಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-1241106957

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.