ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರ ಬಗ್ಗೆ ಕಾಳಜಿ ಹೊಂದಿದ್ದ ವಿಠಲ ಹೇರೂರ: ನಿಂಗಣ್ಣ ಹುಳಗೋಳಕರ

Last Updated 4 ಡಿಸೆಂಬರ್ 2021, 11:12 IST
ಅಕ್ಷರ ಗಾತ್ರ

ಶಹಾಬಾದ: 'ವಿಠಲ ಹೇರೂರ ಅವರು ಕೋಲಿ ಸಮಾಜ ಸೇರಿದಂತೆ ಶೋಷಿತ ಸಮುದಾಯಗಳ ಏಳ್ಗೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು’ ಎಂದು ಕೋಲಿ ಸಮಾಜದ ಮುಖಂಡ ನಿಂಗಣ್ಣ ಹುಳಗೋಳಕರ್ ಹೇಳಿದರು.

ಕೋಲಿ ಸಮಾಜದ ವತಿಯಿಂದ ಅಶೋಕ ನಗರದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಆಯೋಜಿಸಲಾದ ದಿ.ವಿಠಲ ಹೇರೂರ ಅವರ ಪುಣ್ಯಸ್ಮರಣಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹಿಂದುಳಿದ ಕೋಲಿ ಸಮಾಜದ ಜನರಲ್ಲಿ ಜಾಗೃತಿ ಹಾಗೂ ಶಿಕ್ಷಣದ ಅರಿವು ಮೂಡಿಸುವ ಮೂಲಕ ಹೋರಾಟ ಮಾಡಿದ ಧೀಮಂತ ನಾಯಕ ವಿಠಲ ಹೇರೂರರ ತತ್ವಾದರ್ಶಗಳು ಸಮಾಜಕ್ಕೆ ನೀಡಿರುವ ಕೊಡುಗೆಯಾಗಿದೆ. ವೈಚಾರಿಕತೆ ಬೆಳೆಸಲು, ಜನರಲ್ಲಿ ಜಾಗೃತಿ ಮೂಡಿಸಲು ತಮ್ಮ ಬದುಕನ್ನೆ ಮುಡಿಪಾಗಿಟ್ಟು ಹೋರಾಟ ನಡೆಸಿದ ಮುತ್ಸದ್ಧಿ’ ಎಂದು ಹೇಳಿದರು.

ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ್ ತಳವಾರ ಮಾತನಾಡಿದರು.

ನಿಂಗಣ್ಣ ಹುಳಗೊಳಕರ್, ತಿಪ್ಪಣ್ಣ ನಾಟಿಕಾರ,ಶಿವಕುಮಾರ ನಾಟಿಕಾರ್, ಸಂತೋಷ್ ತಿಳಗುಳ, ವಿಜಯಕುಮಾರ್ ಮುತ್ತಗಿ, ಮಲ್ಲಿಕಾರ್ಜುನ ಇಟಗಿ, ವಿಶ್ವನಾಥ ಕಾನಾಪೂರ, ಚಂದ್ರಕಾಂತ ನಾಟಿಕಾರ್, ಮೌನೇಶ್ ಕೊಡ್ಲಿ, ಕಾಶಣ್ಣ ಚನ್ನೂರ್, ದೇವಿಂದ್ರಪ್ಪ ಯಲಗೋಡಕರ್, ಲಕ್ಷ್ಮಣ, ಲಕ್ಷ್ಮಿಕಾಂತ ಮಸಬೋ, ಮಹೇಶ್ ಎಲೇರಿ, ಪ್ರಶಾಂತ ಹದನೂರ್, ಮಹಾದೇವ, ಬಾಬು, ಭೀಮಯ್ಯ ಗುತ್ತೆದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT