ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಸ್ಟ್ರಾಂಗ್‌ ರೂಮ್‌ನಲ್ಲಿ ಮತಪೆಟ್ಟಿಗೆಗಳು ಭದ್ರ

ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಶಸ್ತ್ರಸಜ್ಜಿತ ಪೊಲೀಸರಿಂದ ಬಿಗಿ ಭದ್ರತೆ
Last Updated 29 ಅಕ್ಟೋಬರ್ 2020, 15:29 IST
ಅಕ್ಷರ ಗಾತ್ರ

ಕಲಬುರ್ಗಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದವಿಧಾನ ಪರಿಷತ್‌ಗೆ ನಡೆದ ಮತದಾನದ ಮತಪತ್ರಗಳಿರುವ ಪೆಟ್ಟಿಗೆಗಳನ್ನು ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಿದ ಸ್ಟ್ರಾಂಗ್‌ ರೂಮ್‌ನಲ್ಲಿ ಇಡಲಾಗಿದೆ. ಇಬ್ಬರು ಗನ್‌ ಮ್ಯಾನ್‌ ಸಹಿತ ಆರು ಪೊಲೀಸರು ಈ ಮತಪೆಟ್ಟಿಗೆಗಳನ್ನು ಸರದಿಯಂತೆ ಕಾಯುತ್ತಿದ್ದಾರೆ.

ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಸ್ಟ್ರಾಂಗ್‌ ರೂಮ್‌ ನಿರ್ಮಿಸಲಾಗಿದೆ. ಮತದಾನ ಮುಗಿದ ಬಳಿಕ ಬುಧವಾರ ರಾತ್ರಿಯೇ ಎಲ್ಲ ಮತಗಟ್ಟೆಗಳಿಂದಲೂ ಮತಪೆಟ್ಟಿಗೆಗಳ ಮಸ್ಟರಿಂಗ್‌ ಮಾಡಲಾಯಿತು. ಆಯಾ ಜಿಲ್ಲೆಗಳಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿಯೋಜಿಸಿದ ವಾಹನಗಳಲ್ಲಿ ಎಲ್ಲ ಮತಪೆಟ್ಟಿಗೆಗಳನ್ನೂ ಬುಧವಾರ ರಾತ್ರಿಯೇ ಇಲ್ಲಿನ ಸ್ಟ್ರಾಂಗ್‌ ರೂಮ್‌ಗೆ ತಂದು ಡಿ–ಮಸ್ಟರಿಂಗ್‌ ಮಾಡಲಾಯಿತು.

ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಒಳಪಡುವ ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಿಂದ ತರಲಾದ ಮತಪೆಟ್ಟಿಗೆಗಳನ್ನು ಸ್ಥಳೀಯ ಪೊಲೀಸರು ಕಾವಲು ಕಾಯುತ್ತಿದ್ದಾರೆ.

ನವೆಂಬರ್‌ 2ರಂದು ಮತ ಎಣಿಕೆ ನಡೆಯಲಿದ್ದು, ಈಗಾಗಲೇ ಸ್ಟ್ರಾಂಗ್‌ರೂಮ್‌ ನಿರ್ಮಿಸಿದ ಗಣಿತ ವಿಭಾಗದಲ್ಲೇ ಇದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ವಿಶ್ರಾಂತಿಗೆ ಜಾರಿದ ಅಭ್ಯರ್ಥಿಗಳು: ವಿಧಾನ ಪರಿಷತ್‌ ಆಯ್ಕೆಯಾಗುವ ಹಿಮ್ಮಸ್ಸಿನಲ್ಲಿ ಕಳೆದ ಒಂದೂವರೆ ತಿಂಗಳಿಂದ ಇನ್ನಿಲ್ಲದಂತೆ ಕಸರತ್ತು ಮಾಡುತ್ತಿದ್ದ ಕ್ಷೇತ್ರದ ಐವರೂ ಅಭ್ಯರ್ಥಿಗಳು ಗುರುವಾರ ವಿಶ್ರಾಂತಿಗೆ ಜಾರಿದರು.‌‌

ಪಕ್ಷಗಳ ಬಹುಪಾಲು ಮುಖಂಡರು, ಕಾರ್ಯಕರ್ತರು ಗುರುವಾರ ಅಭ್ಯರ್ಥಿಗಳ ಮನೆಯಲ್ಲೇ ನಿರಾಳವಾಗಿ ಕಾಲ ಕಳೆದರು. ಯಾವ ಯಾವ ಮತಗಟ್ಟೆಗಳಲ್ಲಿ ತಮ್ಮ ಅಭ್ಯರ್ಥಿಗಳಿಗೆ ಎಷ್ಟು ಮತ ಬಂದಿರಬಹುದು ಎಂದು ಅಂದಾಜಿನ ಲೆಕ್ಕಾಚಾರ ಹಾಕಿದರು.

‌ಕಾಂಗ್ರೆಸ್‌ನಿಂದ ಶರಣಪ್ಪ ಮಟ್ಟೂರ, ಬಿಜೆಪಿಯಿಂದ ಶಶೀಲ್ ಜಿ. ನಮೋಶಿ, ಜೆಡಿಎಸ್‌ನಿಂದ ತಿಮ್ಮಯ್ಯ ಪುರ್ಲೆ, ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಹಾಗೂ ಪಕ್ಷೇತರರಾಗಿ ಡಾ.ಚಂದ್ರಕಾಂತ ಸಿಂಗೆ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT