ವಡಗೇರಾ: ‘ಮನುಷ್ಯನ ದೇಹದ ಪ್ರತಿಯೊಂದು ಅಂಗಾಂಗಗಳು ಬಹಳ ಅಮೂಲ್ಯವಾಗಿವೆ ಅವುಗಳ ಸಂರಕ್ಷಣೆಗಾಗಿ ಆಗಾಗ ವೈದ್ಯರನ್ನು ಕಂಡು ಸಲಹೆ ಸೂಚನೆಗಳನ್ನು ಪಡೆಯಬೇಕು’ ಎಂದು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್.ಬಿ.ಕಾಮರೆಡ್ಡಿ ಬೆಂಡೆಬೆಂಬಳಿ ಹೇಳಿದರು.

ತಾಲ್ಲೂಕಿನ ಐಕೂರು ಗ್ರಾಮದಲ್ಲಿ ಅಂಬಾಮಹೇಶ್ವರಿ ಜಾತ್ರಾ ಮಹೋತ್ಸವ ಅಂಗವಾಗಿ ಕಾಮರೆಡ್ಡಿ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಕಣ್ಣು ಹಾಗೂ ಮೂಳೆ ರೋಗದ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.

‘ನಲವತ್ತು ವರ್ಷ ದಾಟಿದ ಪ್ರತಿಯೊಬ್ಬರು ಆರೋಗ್ಯ ಹಾಗೂ ಕಣ್ಣುಗಳ ಬಗ್ಗೆ ನಿರ್ಲಕ್ಷ್ಯವನ್ನು ವಹಿಸುತ್ತಾರೆ. ಇದರಿಂದಾಗಿ ಅಕಾಲಿಕವಾಗಿ ಕೆಲವೊಬ್ಬರು ಅಂಗಾಂಗ ವೈಫಲ್ಯಕ್ಕೆ ಗುರಿಯಾಗುತ್ತಾರೆ ವಯಸ್ಸಾದಂತೆ ಕಣ್ಣುಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಬಹಳಷ್ಟು ಜನರು ಅಂಗಾಂಗಗಳ ಬಗ್ಗೆ ಉದಾಸಿನತೆಯನ್ನು ತೋರುತ್ತಿರುವದರಿಂದ ಗ್ರಾಮೀಣ ಜನರಲ್ಲಿ ಜಾಗೃತಿಯನ್ನು ಮೂಡಿಸಲು ನಮ್ಮ ಆಸ್ಪತ್ರೆ ವತಿಯಿಂದ ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಆಹಾರದ ಪದ್ಧತಿಯಲ್ಲಿ ಬದಲಾವಣೆಯಾದ ಕಾರಣ ಮನುಷ್ಯನಿಗೆ ರೋಗರುಜಿನಿಗಳ ಕಾಡುತ್ತಿವೆ. ಇದರಿಂದ ಮುಕ್ತಿ ಪಡೆಯಲು ಪ್ರತಿಯೊಬ್ಬರು ಉತ್ತಮ ಆಹಾರವನ್ನು ಸೇವನೆ ಮಾಡುವುದರ ಜೊತೆಗೆ ದಿನಾಲೂ ಯೋಗ, ವ್ಯಾಯಾಮ ಹಾಗೂ ಧ್ಯಾನವನ್ನು ಮಾಡಿದಾಗ ಮಾತ್ರ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯ’ ಎಂದು ಅಭಿಪ್ರಾಯ ಪಟ್ಟರು.

ನೇತ್ರ ತಜ್ಞ ಡಾ.ವಿಶ್ವನಾಥ ರೆಡ್ಡಿ ಮಾತನಾಡಿ, ‘ಮನುಷ್ಯನ ಅಂಗಾಂಗಳಲ್ಲಿ ಕಣ್ಣುಗಳು ಅತ್ಯಂತ ಮಹತ್ವದ್ದಾಗಿವೆ. ಕಣ್ಣುಗಳ ಬಗ್ಗೆ ಜಾಗೃತಿ ಇರಲಿ ಕಣ್ಣಿನ ಸಮಸ್ಯೆ ಕಂಡುಬಂದಲ್ಲಿ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯಬೇಕು ಹಾಗೆಯೆ ಬಿಸಿಲಿನಲ್ಲಿ ಓಡಾಡುವಾಗ ಕಣ್ಣುಗಳಿಗೆ ತಂಪು ಕನ್ನಡಕ ಬಳಸಬೇಕು. ಅತಿ ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ ಕಣ್ಣುಗಳಿಗೆ ಹಾನಿಯುಂಟಾಗುತ್ತದೆ ಅವಶ್ಯಕತೆ ಇದ್ದಾಗ ಮಾತ್ರ ಮೊಬೈಲ್ ಬಳಕೆ ಬಳಸಬೇಕು’ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಲಬುರಗಿಯ ತಜ್ಞ ವೈದ್ಯರು, ಸಿಬ್ಬಂದಿ, ಗ್ರಾಮದ ಮುಖಂಡರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.