ವಾಡಿ: ‘ಜಾತಿ ಎಂಬ ವಿಷಬೀಜ ಎಲ್ಲೆಡೆ ಬಿತ್ತಿ ಸಮಾಜದ ಒಗ್ಗಟ್ಟು ಹಾಳು ಮಾಡುವ ಮೂಲಕ ಶಾಂತಿ, ಸುವ್ಯವಸ್ಥೆ ಮತ್ತು ಸಹಬಾಳ್ವೆಗೆ ಧಕ್ಕೆ ತರಲಾಗುತ್ತಿದೆ’ ಎಂದು ಬೌದ್ಧ ಭಿಕ್ಕು ಶಾಂತಿ ಸುಮನ್ ಭಂತೇಜಿ ವಿಷಾದಿಸಿದರು.

ಅಂಬೇಡ್ಕರ್ ಜಯಂತಿ ನಿಮಿತ್ತ ಪಟ್ಟಣದಲ್ಲಿ ಈಚೆಗೆ ಬೌದ್ಧ ಯುವ ಸಂಘಟನೆ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

‘ರಕ್ತದ ಅವಶ್ಯಕತೆ ಜಾತಿ ಸಂಕುಲ ಮೀರಿದ್ದಾಗಿದ್ದು, ಇಂತಹ ಜೀವ ಉಳಿಸುವ ಕಾರ್ಯಗಳ ಆಯೋಜನೆ ಮತ್ತಷ್ಟು ಹೆಚ್ಚಾಗಲಿ’ ಎಂದರು.

ಕಲಬುರಗಿ ನಗರದ ಸ್ಟಾರ್ ಕೇರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸುರಕ್ಷಾ ರಕ್ತನಿಧಿ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು.

ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಜಿಲ್ಲಾಧ್ಯಕ್ಷ ಸಂದೀಪ ಕಟ್ಟಿ ಮಾತನಾಡಿದರು.

ಮುಖಂಡ ಮಾರುತಿ ಕಟ್ಟಿಮನಿ, ಶರಣು ನಾಟೇಕರ, ಶರಣಬಸ್ಸು ಸಿರೂರಕರ, ಸು.ಕೃಷ್ಣಮೂರ್ತಿ, ಮಲ್ಲಿಕಾರ್ಜುನ ಕಟ್ಟಿ ಹಾರೂನ್ ಖುರೇಶಿ, ಕಿಶೋರ ಸಿಂಗೆ, ಖೇಮಲಿಂಗ ಬೆಳಮಗಿ, ಅರುಣಕುಮಾರ ಬರ್ಮಾ, ಉದಯ ಯಾದಗಿರಿ, ಸೂರ್ಯಕಾಂತ ರದ್ದೇವಾಡಿ, ಸಂತೋಷ ಜೋಗೂರ, ಚಂದ್ರು ಧನ್ನೇಕರ, ಸುನೀಲ ಚೌವಣೂರ, ವಿಜಯ ಸಿಂಗೆ, ಪರಶುರಾಮ ಬನಸೋಡೆ, ಸೂಗಪ್ಪ ಮಂಗಳೂರು, ಅಮೃತ ಕೋಮಟೆ, ನಿಂಗಣ್ಣ ಶಾರದಳ್ಳಿ ಪಾಲ್ಗೊಂಡಿದ್ದರು.

ಒಟ್ಟು 60ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-31-1179550960

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.