ವಾಡಿ: ‘ಸಾರ್ವಜನಿಕರಿಗೆ ಸಮ ರ್ಪಕವಾಗಿ ಗ್ಯಾಸ್ ವಿತರಿಸದೇ ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಹಾಗೂ ಬುಕ್ ಮಾಡಿದ ಗ್ಯಾಸ್ ರದ್ದುಪಡಿಸಲಾಗುತ್ತಿದೆ’ ಎಂದು ಸ್ಥಳೀಯರು ಗ್ಯಾಸ್ ವಿತರಕ ಅಂಗಡಿ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ಜರುಗಿತು.

ಕಳೆದ ಹಲವು ದಿನಗಳಿಂದ ಪಟ್ಟಣದಲ್ಲಿ ಗ್ಯಾಸ್ ವಿತರಣೆ ಸರಿಯಾಗಿ ನಡೆಯದೇ ಸಾರ್ವಜನಿಕರ ಗೋಳಾಟ ಮುಂದುವರೆದಿದೆ. ಜನರು ಕೆಲಸ ಕಾರ್ಯ ಬಿಟ್ಟು ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತು ಗ್ಯಾಸ್ ತುಂಬಿಕೊಳ್ಳುವುದು ಸಾಮಾನ್ಯ ಎನ್ನುವಂತಾಗಿದೆ.

ಬುಕ್ ಮಾಡಿದ ಗ್ಯಾಸ್ ಸಿಲಿಂಡರ್ ತರುವುದಕ್ಕೆ ಏಜೆನ್ಸಿ ಅಂಗಡಿಗೆ ಹೋದರೇ ನೀವು ಬೇಗ ಬಂದಿಲ್ಲ. ಅದಕ್ಕೆ ನಿಮ್ಮ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ರದ್ದಾಗಿದೆ ಎಂಬ ಸಿಬ್ಬಂದಿಯ ಹೇಳಿಕೆಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಪ್ರತಿ ಮನೆ ಮನೆಗೆ ಅಡುಗೆ ಅನಿಲ ಸರಬರಾಜು ಮಾಡುವ ಗುರು ಗ್ಯಾಸ್ ಏಜೆನ್ಸಿಯು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಕ್ಕೆ ನಿತ್ಯ ನೂರಾರು ಜನರು ಅಂಗಡಿ ಮುಂದೆ ಸಾಲಾಗಿ ನಿಲ್ಲುತ್ತಿರುವುದೇ ಸಾಕ್ಷಿಯಾಗಿದೆ. ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿದ ಗ್ರಾಹಕರು ಏಜೆನ್ಸಿ ಅಂಗಡಿ ಮುಂದೆ ಸಿಲಿಂಡರ್ ಪಡೆಯಲು ಇಡೀದಿನ ಬಿಸಿಲಲ್ಲಿ ನಿಂತು ಕಾಯುವಂತಾಗಿದೆ. ಆದರೂ ಬುಕ್ ಮಾಡಿದ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ ಎಂದು ಸಿಬ್ಬಂದಿ ವಿರುದ್ಧ ಕಿಡಿ ಕಾರಿದ್ದಾರೆ.

‘ಸಿಲಿಂಡರ್ ವಿತರಣೆಯಲ್ಲಿ ಯಾವುದೇ ರೀತಿ ಅಭಾವ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಪಟ್ಟಣದಲ್ಲಿ ನಿವಾಸಿಗಳು ಬುಕ್ ಮಾಡಿದ ಗ್ಯಾಸ್ ಸಿಲಿಂಡರ್ ನೀಡುತ್ತಿಲ್ಲ. ಬದಲಾಗಿ ನಿಮ್ಮ ಗ್ಯಾಸ್ ರದ್ದಾಗಿದೆ ಎಂದು ಹೇಳಿ ಕಳುಹಿಸುತ್ತಿರುವುದು ಕಾಳಸಂತೆಯ ದಂಧೆ ಬಗ್ಗೆ ಅನುಮಾನ ಮೂಡಿಸುತ್ತಿದೆ. ಗ್ರಾಹಕರ ಮನೆ ಬಾಗಿಲುಗೆ ಅಡುಗೆ ಅನಿಲ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಬೇಕು’ ಎಂದು ಜನಧ್ವನಿ ಜಾಗೃತ ಸಮಿತಿ ವಾಡಿ ಘಟಕದ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-31-688323114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.