ದುಃಸ್ವಪ್ನವಾದ ಕಲಬುರಗಿ ಯಾದಗಿರಿ ಎನ್‌ಎಚ್ ಮೇಲಿನ ರೈಲ್ವೆ ಮೇಲ್ಸೇತುವೆ ಕಾಮಗಾರಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡನೇ ಹಂತದ ಕಾಮಗಾರಿಗೆ ಗ್ರಹಣ,ತುಕ್ಕು ಹಿಡಿಯುತ್ತಿರುವ ರಾಡುಗಳು
ಸಿದ್ದರಾಜ ಎಸ್.ಮಲ್ಕಂಡಿ
Published : 18 ಮಾರ್ಚ್ 2026, 4:35 IST
Last Updated : 18 ಮಾರ್ಚ್ 2026, 4:35 IST
ADVERTISEMENT
ಫಾಲೋ ಮಾಡಿ
Comments
ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ಆದರೆ ಪದೇ ಪದೇ ಗೇಟ್ ಹಾಕುವುದರಿಂದ ಅಪತ್ಕಾಲಿನ ರೋಗಿಗಳು ಮರಣಕ್ಕೆ ತುತ್ತಾಗುತ್ತಿದ್ದಾರೆ. ಕೂಡಲೇ ಸೇತುವೆ ಕಾಮಗಾರಿ ಆರಂಭಿಸಬೇಕು
ಸಂದೀಪ್ ಕಟ್ಟಿ, ದಲಿತ ಸೇನೆ ತಾಲ್ಲೂಕು ಅಧ್ಯಕ್ಷ
ದಿನಕ್ಕೆ ಕನಿಷ್ಠ 15ರಿಂದ 20 ಸಲ ಗೇಟ್ ಹಾಕುವುದರಿಂದ ಮಳೆ ಗಾಳಿ ಬಿಸಿಲಿಗೆ ನಾವು ತತ್ತರಿಸುತ್ತಿದ್ದೇವೆ. ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ ಬೇಗ ಮುಗಿಸಬೇಕು. ಸಮಸ್ಯೆ ಬಗೆಹರಿಸಬೇಕು
ಮಲ್ಲಿಕಾರ್ಜುನ ಮಣಿಗಿರಿ ಶೇಖಮ್ಮ ರೇಣುಕಾ ರಾಠೋಡ ವಾಡಿ
‘ಆರು ತಿಂಗಳಲ್ಲಿ ಮುಕ್ತಾಯ’
ರೈಲ್ವೆ ಮೇಲ್ಸೇತುವೆಯನ್ನು ಮುಂಚೆ ರೈಲ್ವೆ ಇಲಾಖೆಯೇ ಮಾಡುವುದಾಗಿ ಹೇಳಿತ್ತು. ಅಪ್ರೋಚ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯಿಂದ ಮಾಡಬೇಕಿತ್ತು. ಆದರೆ ತೀವ್ರ ವಿಳಂಬವಾಗಿದ್ದರಿಂದ ರೈಲ್ವೆ ಬದಲು ಲೋಕೋಪಯೋಗಿ ಇಲಾಖೆಯಿಂದಲೇ ಮಾಡುವ ತೀರ್ಮಾನ ಕೈಗೊಂಡಿದ್ದರಿಂದ ಅದರ ಅನುಮತಿಗಳನ್ನು ಪಡೆಯಲು ಮುಂಬೈ ಸಿಕಂದರಾಬಾದ್ ದೆಹಲಿಗೆ ಹೋಗುವುದರಲ್ಲೇ ಸಮಯ ಕಳೆದಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಯೊಬ್ಬರು. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು ‘ನಾಲ್ಕು ತಿಂಗಳ ಹಿಂದೆ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ₹ 75 ಕೋಟಿ ಮೊತ್ತದ ಟೆಂಡರ್ ಅಂತಿಮಗೊಂಡಿದ್ದು ಕೆಲಸ ಶುರುವಾಗಿದೆ. ರೈಲ್ವೆ ಇಲಾಖೆಯವರ ಯುಟಿಲಿಟಿಗಳನ್ನು ತೆರವುಗೊಳಿಸಬೇಕು. ಇದಕ್ಕೆ ಕೊಂಚ ಸಮಯ ತಗಲುತ್ತದೆ. ಮುಂದಿನ ಆರು ತಿಂಗಳಲ್ಲಿ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ’ ಎಂದರು.