ವಾಡಿ: ‘ಒಳಮೀಸಲಾತಿ ದಕ್ಕದಿದ್ದರೆ ಮಾದಿಗ ಸಮುದಾಯ ಉಸಿರು ಚೆಲ್ಲುವಂತಹ ಸ್ಥಿತಿ ಇದ್ದು ಕೂಡಲೇ ರಾಜ್ಯ ಸರ್ಕಾರ ಯಾವುದೇ ಒತ್ತಡಗಳಿಗೆ ಬಲಿಯಾಗದೇ ನ್ಯಾ. ನಾಗಮೋಹನದಾಸ್ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು’ ಎಂದು ಮಾದಿಗ ಸಮಾಜದ ಜಿಲ್ಲಾ ಮುಖಂಡ ಶ್ಯಾಮ್ ನಾಟೇಕಾರ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದ ಜಾಂಬವೀರ ಕಾಲೋನಿಯಲ್ಲಿ ಡಾ.ಬಾಬು ಜಗಜೀವನರಾಂ ಜಯಂತ್ಯುತ್ಸವ ಸಮಿತಿ, ಮಾದಿಗ ಸಮಾಜ ಹಾಗೂ ಆದಿ ಜಾಂಬವ ತರುಣ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 119ನೇ ಜಯಂತ್ಯುತ್ಸವ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಒಳಮೀಸಲಾತಿ ಜಾರಿಯಾಗದಿದ್ದರೆ ಇಡೀ ರಾಜ್ಯಾದ್ಯಂತ ಮಾದಿಗ ಸಮಾಜ ಮತ್ತೊಮ್ಮೆ ಉಗ್ರ ಪ್ರತಿಭಟನೆಗೆ ಮುಂದಾಗಲಿದೆ’ ಎಂದು ಎಚ್ಚರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ‘ಬಾಬು ಜಗಜೀವನರಾಂ ಅವರು ಶ್ರಮಿಕರ ಪರ ಒಲವು ಹೊಂದಿದ್ದ ಮಹಾನ್ ವ್ಯಕ್ತಿಯಾಗಿದ್ದರು. ಬಡವರು, ದಲಿತರು ಮತ್ತು ತುಳಿತಕ್ಕೆ ಒಳಗಾದ ಜನಸಮುದಾಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಈ ದೇಶದ ಹಸಿರು ಕ್ರಾಂತಿಯ ಹರಿಕಾರರು’ ಎಂದರು.

‘ಮಾದಿಗ ಸಮುದಾಯದ ಬೇಡಿಕೆಯಂತೆ ಕಲ್ಯಾಣ ಪಂಟಪ ನಿರ್ಮಾಣಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವೈಯುಕ್ತಿಕವಾಗಿ ನಾನು ಸಹಾಯ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ‘ದೀರ್ಘಕಾಲ ಸಚಿವರಾಗಿ ಸೇವೆ ಸಲ್ಲಿಸಿದ್ದ ಜಗಜೀವನರಾಂ ಅವರು ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಾದಿಗ ಸಮುದಾಯ ಶಿಕ್ಷಣದಲ್ಲಿ ಹಿಂದೆ ಇರುವುದರಿಂದ ಆದಿ ಜಾಂಬವ ಶಿಕ್ಷಣ ಸಂಸ್ಥೆಗೆ ₹10 ಲಕ್ಷ ಅನುದಾನ ಬಿಡುಗಡೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜನಪದ ಕಲಾವಿದ ಡಿಂಗ್ರಿ ನರಸಪ್ಪ ಅವರಿಗೆ ‘ಡಾ. ಬಾಬು ಜಗಜೀವನರಾಂ’ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ವಿಶೇಷ ಸನ್ಮಾನ ಮಾಡಲಾಯಿತು. ರಾಜು ಮುಕ್ಕಣ್ಣ ಮಾತನಾಡಿದರು.

ಶಿವಾನಂದ ಪಾಟೀಲ ಮರತೂರ, ಲಿಂಗರಾಜ ತಾರಫೈಲ್, ವೀರಣ್ಣಯಾರಿ ಮಾತನಾಡಿದರು.

ಸಮಿತಿ ಅಧ್ಯಕ್ಷ ಶರಣು ಮರತೂರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಿತಿ ಗೌರವ ಅಧ್ಯಕ್ಷ ಚಂದಪ್ಪ ಕಟ್ಟಿಮನಿ, ವಾಡಿ ಅಪರಾಧ ವಿಭಾಗದ ಪಿಎಸ್ಐ ರೇಣುಕಾ ಉಡಗಿ, ಅರ್ಜುನ ಕಾಳೆಕರ, ಭೀಮರಾಯ ದೊರಿ, ಬಸವರಾಜ ತುಮಕೂರ, ಗುರುನಾಥ ಮಣಿಗಿರ, ಭೀಮಣ್ಣ ಹವಾಲ್ದಾರ್, ಬಸವರಾಜ ಬೂದಿಹಾಳ, ಶರಣಬಸಪ್ಪ ರಾವೂರ, ಶಿವಕುಮಾರ, ಮಲ್ಲಿಕಾರ್ಜುನ ಮುದ್ದಾಳ, ಸಮಿತಿಯ ಕುಮಾರ ರಾಮಚಂದ್ರ ದಾಸ, ಜಗದೀಶ ಮುಕ್ಕನಾಳ, ರಾಜು ರಾಂಪುರಹಳ್ಳಿ, ಶಶಿ ಅರೋಲಿಕರ, ಶಿವಕುಮಾರ ತುಮಕೂರಕರ, ಅನೀಲ ಮುದ್ದಾಳ, ವಿಜಯಕುಮಾರ ಯಲಗಟ್ಟಿ, ಮಲ್ಲಿಕಾರ್ಜುನ ಚಾಮನಳ್ಳಿ, ಚಂದು ಕಾಂಬಳೆ, ಈಶ್ವರ ಹೊಸಮನಿ, ಮಲ್ಲಿಕಾರ್ಜುನ ಮುತ್ಯಾ, ಇಮದಾಪುರದ ಸಾಯಪ್ಪ ಮುತ್ಯಾ ಉಪಸ್ಥಿತರಿದ್ದರು.

ಶ್ರೀಕಾಂತ ಬಿರಾಳ ಸ್ವಾಗತಿಸಿದರು. ಆರ್. ಜೆ.ಮಂಜು ನಿರೂಪಿಸಿದರು. ರಿಚರ್ಡ್ ಮಾರೆಡ್ಡಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-31-1582182426

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.