ವಾಡಿ: ಮಾನಸಿಕವಾಗಿ ಅಸ್ವಸ್ಥಗೊಂಡು ಅಲೆದಾಡುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ಭಾನುವಾರ ಪೋಷಕರಿಗೆ ಒಪ್ಪಿಸಿದರು.

ಕಳೆದ 2 ತಿಂಗಳ ಹಿಂದೆ ಹಲಕರ್ಟಿ ಗ್ರಾಮಕ್ಕೆ ಬಂದಿದ್ದ ರಾಯಚೂರು ತಾಲ್ಲೂಕಿನ ಇಡಪಾನೂರು ಗ್ರಾಮದ ಮಾನಸಿಕ ಆಸ್ವಸ್ಥ ಮಹಿಳೆ ನರಸಮ್ಮ, ಬಸ್ ನಿಲ್ದಾಣದಲ್ಲಿ ವಾಸವಾಗಿದ್ದರು. ಸ್ಥಳೀಯರು ಅನ್ನ, ನೀರು ಹಾಗೂ ಬಟ್ಟೆ ಒದಗಿಸಿದ್ದರು. ಆದರೆ ಶನಿವಾರ ರಾತ್ರಿ ಬಟ್ಟೆ ಹರಿದ ಸ್ಥಿತಿಯಲ್ಲಿ ಮಹಿಳೆ ಕಂಡು ಬಂದಿದ್ದರಿಂದ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಆಗಮಿಸಿದ್ದ ಸಿಪಿಐ ಸಿದ್ದಬಸವನಗೌಡ, ಪಿಎಸ್ಐ ತಿರುಮಲೇಶ ಕೆ. ಹಾಗೂ ರೇಣುಕಾ ಉಡಗಿ ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಪೋಷಕರ ಪತ್ತೆ ಹಚ್ಚಿದ್ದಾರೆ. ತಡರಾತ್ರಿ ಠಾಣೆಗೆ ಬಂದ ಪೋಷಕರು ಮಹಿಳೆಯನ್ನು ಜತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.

‘ಮಾನಸಿಕ ಅಸ್ವಸ್ಥ ಮಹಿಳೆ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಳು. ಎರಡು ತಿಂಗಳ ಹಿಂದೆ ಮನೆಯಿಂದ ತಪ್ಪಿಸಿಕೊಂಡಿದ್ದಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಪೋಷಕರಿಗೆ ಒಪ್ಪಿಸಲಾಗಿದೆ’ ಎಂದು ಪಿಎಸ್ಐ ತಿರುಮಲೇಶ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.