ವಾಡಿ: ಪಾರ್ಶ್ವವಾಯುನಿಂದ ಬಳಲುತ್ತಿದ್ದ ಸಂಬಂಧಿಯನ್ನು ಆಸ್ಪತ್ರೆಗೆ ಸೇರಿಸಿ ಮಧ್ಯರಾತ್ರಿ ಊರಿಗೆ ವಾಪಸ್ಸಾಗುತ್ತಿರುವ ಹೊತ್ತಿನಲ್ಲೇ ಲಾರಿ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಭೀಕರ ಅಫಘಾತ ಸಂಭವಿಸಿ ಐವರು ಮೃತಪಟ್ಟಿದ್ದಾರೆ.

ಲಾಡ್ಲಾಪುರ ಹಲಕರ್ಟಿ ಮಧ್ಯೆ ರಾಷ್ಟ್ರೀಯ ಹೆದ್ದಾರಿ–150ರಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ 5 ಜನ ಸಂಬಂಧಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಧಾರುಣ ಸಾವಿಗೆ ಇಂಗಳಗಿ ಗ್ರಾಮಸ್ಥರು ಮರುಗಿದ್ದಾರೆ.

ಮಹೆಬೂಬ್ ಅಲಿ(42), ತೊಲಾ ಪಾಷಾ(30), ಹುಸೇನ್ ಶಾಹಾಪುರ(47), ರಸೂಲಬಿ(43) ಹಾಗೂ ಫಾತೀಮಾ(40) ಮೃತಪಟ್ಟವರು. ಅಪಘಾತದಲ್ಲಿ ವಾಡಿ ಸಮೀಪದ ಇಂಗಳಗಿ ನಿವಾಸಿಗಳು ಅಪ್ಪಚ್ಚಿಯಾಗಿದ್ದು, ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.

ಪಾರ್ಶ್ವವಾಯು ಪೀಡಿತ ಸಂಬಂಧಿ ಮಹ್ಮದ್ ಅಬ್ದುಲ್ ಸಾಬ್ನನ್ನು ಯಾದಗಿರಿ ಆಸ್ಪತ್ರೆಗೆ ದಾಖಲಿಸಲು 9 ಮಂದಿ ತೆರಳಿದ್ದರು. ಅದರಲ್ಲಿ ಐವರು ಇಂಗಳಗಿಗೆ ಮರಳುತ್ತಿದ್ದರು. ಕಳೆದ ವರ್ಷವಷ್ಟೇ ವಿವಾಹವಾಗಿದ್ದ ಚಾಲಕ ತೊಲಾ ಪಾಷಾ ತನ್ನ 5 ತಿಂಗಳು ಗರ್ಭಿಣಿ ಮಡದಿ ರೇಷ್ಮಾ ಬೇಗಂಗೆ ಕರೆ ಮಾಡಿ ಒಂದು ತಾಸಿನಲ್ಲಿ ಮನೆಗೆ ಬರುತ್ತೇನೆ ಎಂದು ತಿಳಿಸಿದ್ದ. ಆದರೆ, ಸೇರಿದ್ದು ಮಾತ್ರ ಮಸಣಕ್ಕೆ.

ಘಟನಾ ಸ್ಥಳಕ್ಕೆ ಡಿಐಜಿ ಶಾಂತನು ಸಿನ್ಹಾ, ಎಸ್ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾಮೂಹಿಕ ಅಂತ್ಯಸಂಸ್ಕಾರ: ಶನಿವಾರ ಮಧ್ಯಾಹ್ನ ಶವಗಳ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವಗಳನ್ನು ಹಸ್ತಾಂತರಿಸಲಾಯಿತು. ಸಂಜೆ ಇಂಗಳಗಿ ಗ್ರಾಮದಲ್ಲಿ ನಡೆದ ಸಾಮೂಹಿಕ ಅಂತ್ಯಸಂಸ್ಕಾರದಲ್ಲಿ ಇಡೀ ಗ್ರಾಮಸ್ಥರು ಭಾಗವಹಿಸಿದ್ದರು. ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-34-200954283

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.