ವಾಡಿ: ಮಂಗಳವಾರ ಮಧ್ಯಾಹ್ನ ಬೀಸಿದ ರಭಸದ ಬಿರುಗಾಳಿಯು ನಾನಾ ಅವಾಂತರ ಸೃಷ್ಟಿಸಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಮರಗಿಡಗಳು ಬಿದ್ದಿದ್ದರೆ, ಚಿತ್ತಾಪುರ ತಾಲ್ಲೂಕಿನ ಮಾರಡಗಿಯಲ್ಲಿ ರಕ್ಕಸ ಬಿರುಗಾಳಿಯು ರೈತರು ಸೇರಿದಂತೆ ಹಲವರ ಕಣ್ಣೀರಿಗೆ ಕಾರಣವಾಗಿದೆ.

ಭಾರೀ ಬಿರುಗಾಳಿಯಿಂದ ಪಪ್ಪಾಯ ತೋಟ ಹಾಳಾಗಿದೆ. ಸ್ಥಳೀಯ ರೈತ ಮನೋಹರ ಕುಲಕರ್ಣಿಯವರ 8 ಎಕರೆ ತೋಟದಲ್ಲಿ ಹುಲುಸಾಗಿ ಬೆಳೆದಿದ್ದ ನೂರಾರು ಪಪ್ಪಾಯ ಗಿಡಗಳು ಸಂಪೂರ್ಣ ನೆಲಕಚ್ಚಿದೆ. ಗಿಡದ ತುಂಬಾ ತುಂಬಿಕೊಂಡಿದ್ದ ಗಿಡಗಳು ಪಪ್ಪಾಯ ಹಣ್ಣುಗಳ ಸಮೇತ ನೆಲಕ್ಕೆ ಬಿದ್ದಿವೆ.

ಮಾರಾಟಕ್ಕೆ ಸಿದ್ಧವಾಗಿದ್ದ ಲಕ್ಷಾಂತರ ಮೌಲ್ಯದ ಪಪ್ಪಾಯ ಮಣ್ಣು ಪಾಲಾಗಿದ್ದು, ರೈತರ ಮುಖ ಕಪ್ಪಿಡುವಂತೆ ಮಾಡಿದೆ. ಅದೇ ಗ್ರಾಮದ ಸಿದ್ಧಾರ್ಥ ಬಡಾವಣೆಯಲ್ಲಿ ಮರಲಿಂಗಪ್ಪ ನಡಿಗೇರಿ ಅವರ ಮನೆಯ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಮೇಲ್ಛಾವಣಿ, ಗೋಡೆ ಸೀಳಿದೆ. ಮೆಟ್ಟಿಲು ಮತ್ತು ಹಾಳಾಗಿವೆ. ಮರೆಪ್ಪ ತಳಕ ಅವರ ಪತ್ರಾಗಳ ಮನೆ ಮೇಲೆ ಬಿದ್ದಿದ್ದರಿಂದ ಸಂಪೂರ್ಣ ಮನೆ ಕುಸಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ನಾಗಮ್ಮ ಅಚ್ಚೋಲಿಯವರ ಹಳೆಮನೆಯ ಗೋಡೆ ಕುಸಿದಿದೆ. ವಿಕ್ರಂ ಪಾಟೀಲರ ಮನೆಗೋಡೆ ಬಿದ್ದಿದೆ. ದನಗಳು ಕಟ್ಟಲು ಹಾಕಿದ್ದ ಪತ್ರಾ ಗಾಳಿಗೆ ಹಾರಿಹೋಗಿವೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹೆದ್ದಾರಿಗುರುಳಿದ ಮರಗಳು: ಸಂಚಾರ ಸ್ಥಗಿತ

ಕಮಲಾಪುರ: ಪಟ್ಟಣದಲ್ಲಿ ಬುಧವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯುದ್ದಕೂ ಹತ್ತಾರು ಮರಗಳು ಧರೆಗುರುಳಿದ್ದು, ಹಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಗುರುದತ್ ಪೆಟ್ರೋಲ್ ಬಂಕ್, ಸಿಎನ್ಜಿ ಬಂಕ್ ಬಳಿ ಅನೇಕ ನೀಲಗಿರಿ ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿದ್ದವು. ಸಂಚರಿಸಲಾಗದೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಜೆಸಿಬಿ ಸಹಾಯದಿಂದ ಪೊಲೀಸರು ಮರಗಳನ್ನು ಬದಿಗೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.