ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡ್ರಾಮಿ | ಕುಡಿಯುವ ನೀರಿಗಾಗಿ ರಾತ್ರಿಯಿಡೀ ಜಾಗರಣೆ

Last Updated 26 ಮೇ 2020, 19:30 IST
ಅಕ್ಷರ ಗಾತ್ರ

ಯಡ್ರಾಮಿ: ಕುಡಿಯುವ ನೀರಿಗಾಗಿ ರಾತ್ರಿಯಿಡೀ ಜಾಗರಣೆ ಮಾಡಬೇಕಾದ ಸ್ಥಿತಿಯಲ್ಲಿ ಗ್ರಾಮಸ್ಥರಿದ್ದಾರೆ. ನಿತ್ಯ 2 ಕಿ.ಮೀ ದೂರ ಹೋಗಿ ನೀರು ತರಬೇಕಾದ ಸ್ಥಿತಿ ಉದ್ಭವಿಸಿದೆ. ಓವರ್ ಹೆಡ್ ಟ್ಯಾಂಕ್ ಇದ್ದರೂ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಹನಿ ನೀರಿಗಾಗಿ ಪರದಾಡಬೇಕಾಗಿದೆ.

ಹೌದು, ತಾಲ್ಲೂಕಿನ ವಡಗೇರಾ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಹಂಗರಗಾ(ಕೆ) ಗ್ರಾಮದ ಚಿಂತಾಜನಕ ಸ್ಥಿತಿ ಇದು. 2 ಸಾವಿರ ಜನಸಂಖ್ಯೆ ಇದೆ. ಸರ್ಕಾರ ನೀರಿಗಾಗಿ ಲಕ್ಷಗಟ್ಟಲೆ ಅನುದಾನ ಖರ್ಚು ಮಾಡಿದರೂ ಸಹ ಅದರ ಉಪಯೋಗ ಗ್ರಾಮದ ಜನರಿಗೆ ತಲುಪುತ್ತಿಲ್ಲಎನ್ನುತ್ತಾರೆ ನಿವಾಸಿಗಳು.

ಗ್ರಾಮದಲ್ಲಿ ಸಿಸಿ ರಸ್ತೆಗಳು ಹದಗೆಟ್ಟಿವೆ. ಚರಂಡಿ ಅವ್ಯವಸ್ಥೆಯಿಂದ ಗಬ್ಬು ವಾಸನೆ ಬರುತ್ತಿದೆ. ಸ್ವಚ್ಚತೆ ಮರೀಚಿಕೆಯಾಗಿದೆ. ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ. ಅಧಿಕಾರಿಗಳು ಬಂದು ನೋಡಿ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತ ಇದೆ. ಗ್ರಾಮದಲ್ಲಿ 4 ಕೊಳವೆ ಬಾವಿಗಳು ಇದ್ದು, ಒಂದು ನಿರುಪಯುಕ್ತವಾಗಿದೆ. ಉಳಿದವುಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಒಂದು ಕೊಡ ನೀರು ತುಂಬಲು ಗಂಟೆಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೂಡ ಇಲ್ಲ.

ಈ ಕೊಳವೆ ಬಾವಿಗಳಿಗೆ ಹೋಗಲು ಸಿಸಿ ರಸ್ತೆಗಳಿಲ್ಲ. ಮಳೆಗಾಲದಲ್ಲಿ ಕಾಲು ಜಾರಿ ಬೀಳಬೇಕಾದ ಸ್ಥಿತಿ ಇದೆ. ಗ್ರಾಮದಲ್ಲಿರುವ ಓವರ್ ಹೆಡ್ ಟ್ಯಾಂಕ್‍ಗೆ ಪಂಚಾಯಿತಿ ಸಿಬ್ಬಂದಿ ನೀರು ಪೂರೈಸದೆ ನಿರ್ಲಕ್ಷ್ಯ ಮಾಡುತ್ತಿರುವುದೇ ಸಮಸ್ಯೆಗೆ ಮೂಲ ಕಾರಣ ಎನ್ನುತ್ತಾರೆ ನಿವಾಸಿಗಳು.

ಗ್ರಾಮದಲ್ಲಿ 15 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ತೆರೆದ ಬಾವಿಯಲ್ಲಿ ನೀರಿದ್ದರೂ ಅದಕ್ಕೆ ತಡೆಗೋಡೆ ಇಲ್ಲ. ತುಂಬಾ ಆಳವಾದ ಈ ಬಾವಿಯಲ್ಲಿ ಅನಾಹುತವಾದರೆ ದೇವರೇ ಕಾಪಾಡಬೇಕಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಪಿಡಿಒ ಮ್ತತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನ ಆಗಿಲ್ಲ ಎಂಬುದು ಗ್ರಾಮಸ್ಥರ ಆಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT