ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಇಂದು, ನಾಳೆ ನೀರು ವ್ಯತ್ಯಯ

Last Updated 23 ಜುಲೈ 2020, 15:44 IST
ಅಕ್ಷರ ಗಾತ್ರ

ಕಲಬುರ್ಗಿ: ನಗರಕ್ಕೆ ನೀರು ಸರಬರಾಜು ಮಾಡುವ ಭೀಮಾ ನದಿಯ ಸರಡಗಿ ಮೂಲ ಸ್ಥಾವರದಲ್ಲಿನ 1200 ಎಚ್.ಪಿ.ಯ ಮೋಟಾರ್‌ದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ, ತುರ್ತು ದುರಸ್ತಿ ಕಾರ್ಯಕೈಗೊಳ್ಳಲಾಗಿದೆ. ಕಾರಣ ನಗರಕ್ಕೆ ಜುಲೈ 24 ಹಾಗೂ 25ರಂದು ನಗರದ ಬಹುಪಾಲು ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು.31ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ರಿಯಾಯಿತಿ
ಕಲಬುರ್ಗಿ:
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಪ್ರಸಕ್ತ ವರ್ಷದ ತೆರಿಗೆಯನ್ನು ಜುಲೈ 31ರೊಳಗೆ ಪಾವತಿಸಿದರೆ ಶೇ 5ರಷ್ಟು ರಿಯಾಯಿತಿನೀಡಲಾಗುತ್ತಿದೆ.

ವಿಳಂಬದ ದಂಡವನ್ನು ಜುಲೈ 1ರಿಂದ ಅನ್ವಯಿಸುವ ಬದಲಾಗಿ 2020ರ ನವೆಂಬರ್ 1ರಿಂದ ಅನ್ವಯವಾಗುವಂತೆ ವಿಧಿಸಲಾಗುತ್ತದೆ. ಈ ಅವಕಾಶ ಕೇವಲ 2020-21ನೇ ಸಾಲಿಗಾಗಿ ಮಾತ್ರ ಅನ್ವಯಿಸುತ್ತದೆ ಎಂದು ‌ಪಾಲಿಕೆಯ ಉಪ ಆಯುಕ್ತ (ಕಂದಾಯ) ಪ್ರಕಾಶ ಸಿ. ಹರಕುಡೆ ತಿಳಿಸಿದ್ದಾರೆ.

ಸಾರ್ವಜನಿಕರ ಅನುಕೂಲಕ್ಕಾಗಿ ಮಹಾನಗರ ಪಾಲಿಕೆಯ ವೆಬ್‌ಸೈಟ್‌ ‌http://kalaburagicitycorp.org ಇದರಲ್ಲಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೇ ಮಹಾನಗರ ಪಾಲಿಕೆಯ ನೆಲಮಹಡಿಯ ಎರಡನೇ ಅಂತಸ್ತಿನ ಆವರಣದಲ್ಲಿ ಹಾಗೂ ನಗರದಲ್ಲಿರುವ ‘ಗುಲಬರ್ಗಾ ಒನ್’ ಕೇಂದ್ರಗಳಲ್ಲಿ ತೆರಿಗೆ ಪಾವತಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT