ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುನ್ನೂರು: ಎತ್ತು ತಿವಿದು ಮಹಿಳೆ ಸಾವು

Published 3 ಸೆಪ್ಟೆಂಬರ್ 2024, 2:38 IST
Last Updated 3 ಸೆಪ್ಟೆಂಬರ್ 2024, 2:38 IST
ಅಕ್ಷರ ಗಾತ್ರ

ವಾಡಿ: ತಾನೇ ಸಾಕಿದ್ದ ಎತ್ತಿನಿಂದ ಬಲವಾಗಿ ತಿವಿತಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ಚಿತ್ತಾಪುರ ತಾಲ್ಲೂಕಿನ ತುನ್ನೂರು ಗ್ರಾಮದಲ್ಲಿ ಸೋಮವಾರ ಜರುಗಿದೆ.

ಕೃಷಿ ಮಹಿಳೆ ಮಲ್ಕವ್ವ ಬಸವಂತ ಹೊಸಮನಿ (56) ಮೃತ ದುರ್ದೈವಿ. ಆ.28ರಂದು ಎತ್ತು ಮೇಯಿಸಲೆಂದು ಹೊಲಕ್ಕೆ ಹೋದಾಗ ಏಕಾಏಕಿ ಮಹಿಳೆ ಮೇಲೆ ದಾಳಿ ಮಾಡಿದೆ. ಇದರಿಂದ ಹೊಟ್ಟೆ ಭಾಗಕ್ಕೆ ತೀವ್ರವಾಗಿ ಗಾಯವಾಗಿತ್ತು. ಮಹಿಳೆಯನ್ನು ಚಿಕಿತ್ಸೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. 5 ದಿನಗಳ ಚಿಕಿತ್ಸೆ ಬಳಿಕವೂ ಚೇತರಿಸಿಕೊಳ್ಳದೆ ಸೋಮವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಮೃತ ಮಹಿಳೆಗೆ ಪತಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಸೋಮವಾರ ತುನ್ನೂರು ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿತು.

ಪರಿಹಾರಕ್ಕೆ ಒತ್ತಾಯ: ಮೃತ ಮಹಿಳೆ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಪ್ಪ ಕರುಣಿಕ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT