ಶನಿವಾರ, ಡಿಸೆಂಬರ್ 7, 2019
22 °C
ಅಭಿವೃದ್ಧಿ ಮಹಿಳಾ ಸಹಕಾರ ಬ್ಯಾಂಕ್‌ನ ಬೆಳ್ಳಿ ಹಬ್ಬ

ಮಹಿಳೆಯರಿಗೆ ಶಿಕ್ಷಣ ಅಗತ್ಯ: ಬಸವಣ್ಣಪ್ಪ ಉಡಚಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಶಿಕ್ಷಣ ಅಗತ್ಯವಾಗಿದೆ’ ಎಂದು ಕೃಷಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಬಸವಣ್ಣಪ್ಪ ಉಡಚಣ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಅಭಿವೃದ್ದಿ ಮಹಿಳಾ ಸಹಕಾರ ಬ್ಯಾಂಕ್‌ನ 25ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಮಾಜದಲ್ಲಿ ಹೆಣ್ಣು ಮಕ್ಕಳ ಬಗೆಗಿನನ ಕೀಳು ಭಾವನೆ ನಿವಾರಣೆ ಆಗಬೇಕು. ಮಹಿಳೆಯರು ಮೊದಲು ತಮ್ಮನ್ನು ತಾವು ಗೌರವದಿಂದ ಕಾಣಬೇಕು. ನಂತರ ಸಮಾಜ ತಾನಾಗಿಯೇ ಗೌರವಿಸುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ’ ಎಂದರು.

‘ಅಧುನಿಕ ಯುಗದಲ್ಲಿ ಹೊಸ ಆವಿಷ್ಕಾರ ಮಾಡುವ ಮಟ್ಟಕ್ಕೆ ಮಹಿಳೆಯರು ಬೆಳೆದಿದ್ದಾರೆ. ಮಹಿಳೆಯರು ನಾಲ್ಕು ಗೋಡೆಯ ಮಧ್ಯೆ ಕುಳಿತುಕೊಳ್ಳದೇ ಉದ್ಯೋಗವನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸುವ ಮೂಲಕ ಮಾದರಿ ಜೀವನ ನಡೆಸಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ ಅಧ್ಯಕ್ಷೆ ಕವಿತಾ ಪಾಟೀಲ, ‘ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸುವುದನ್ನು ರೂಢಿಸಿಕೊಂಡು ಕುಟುಂಬಗಳ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಬೇಕು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬ್ಯಾಂಕ್ ನ ಹಳೆ ನಿರ್ದೇಶಕರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷರಾದ ಶಶಿಕಲಾ ವಿ. ಟೆಂಗಳಿ, ನಿರ್ದೇಶಕರಾದ ಅಜನಾ ಸತೀಶ ,ನಿರ್ಮಲಾದೇವಿ, ಶೈಲಜಾ ಎಂ. ಭೀಮಳಿ, ಸವಿತಾ ಆರ್ ದೇಶಮುಖ, ತೇಜಶ್ರೀ ಶಟಗಾರ, ಕಮಲಮ್ಮ ಶಹಾಬಾದಿ, ಸರ್ವಮಂಗಳಾ ಹಿರೇಮಠ, ಶೀಲಾ ಹತ್ತಿ, ಇಂದುಮತಿ ಎಂ. ಜೇವರ್ಗಿ, ಬೋರಮ್ಮ ಪಟ್ಟಣ್ಣ, ರಾಜಶ್ರೀ, ಸುಮಾ, ಸುಮಂಗಲಾ, ಮೀನಾಕ್ಷಿ ಗಂಗಾ ಇದ್ದರು.

ಪ್ರತಿಕ್ರಿಯಿಸಿ (+)