‘ಸ್ಮಾರಕಗಳ ರಕ್ಷಣೆಯಿಂದ ಪ್ರವಾಸೋದ್ಯಮ ವೃದ್ಧಿ‘

7

‘ಸ್ಮಾರಕಗಳ ರಕ್ಷಣೆಯಿಂದ ಪ್ರವಾಸೋದ್ಯಮ ವೃದ್ಧಿ‘

Published:
Updated:
Prajavani

ಕಲಬುರ್ಗಿ: ‘ಸ್ಮಾರಕಗಳ ರಕ್ಷಣೆಯಿಂದ ಪ್ರವಾಸೋದ್ಯಮ ಬೆಳೆಯುತ್ತದೆ. ಪ್ರವಾಸೋದ್ಯಮದಿಂದ ನಮ್ಮ ಆರ್ಥಿಕತೆ ಹೆಚ್ಚಿ, ಬಡತನ ಅಳಿಯುತ್ತದೆ’ ಎಂದು ಆಗಾಖಾನ್‌ ಸಂಸ್ಕೃತಿ ಟ್ರಸ್ಟ್‌ ನಿರ್ದೇಶಕ ಕೆ.ಕೆ. ಮಹಮ್ಮದ್‌ ಹೇಳಿದರು.

ಇಲ್ಲಿಯ ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯ ಸಂಯುಕ್ತವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸ್ಮಾರಕಗಳ ಸಮಗ್ರ ಸಂರಕ್ಷಣಾ ವಿಧಾನಗಳು’ ವಿಷಯದ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಸ್ಮಾರಕಗಳ ರಕ್ಷಣೆ ಸಂದರ್ಭದಲ್ಲಿ ಹಲವಾರು ಸಮಸ್ಯೆ ಎದುರಾಗುತ್ತವೆ. ಅವು ವಿಕೋಪಕ್ಕೆ ಹೋಗಿ ಸಮಾಜದ ಸ್ವಾಸ್ಥ್ಯ ಹಾಳಾಗುವ ಸನ್ನಿವೇಶ ನಿರ್ಮಾಣವಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಸ್ಮಾರಕಗಳ ರಕ್ಷಣೆಗೆ ಸರ್ಕಾರದೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಮೈಸೂರಿನ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಕಾರ್ಯದರ್ಶಿ ಡಾ.ಶ್ರೀನಿವಾಸ ರಾವ್ ಮಾತನಾಡಿ, ‘ನಮ್ಮನ್ನು ನಾವು ಅರಿಯುವುದಕ್ಕೆ ಇತಿಹಾಸ ಸಹಕಾರಿಯಾಗಿದೆ. ಇತಿಹಾಸವನ್ನು ತಿಳಿದುಕೊಂಡರೆ ನಾವು ಶ್ರೀಮಂತರಾಗಬಹುದು’ ಎಂದರು.

ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಶಾಂತಲಾ ನಿಷ್ಠಿ, ಜಗದೇವಿ ಕಲಶೆಟ್ಟಿ, ಪ್ರೊ.ರೇಣುಕಾ ಕನಕೇರಿ, ಡಾ.ವೆಂಕಣ್ಣ ಡೊಣ್ಣೆಗೌಡರ ಇದ್ದರು.

ಪ್ರಾಚಾರ್ಯ ಡಾ.ಎನ್.ಎಸ್. ಪಾಟೀಲ ಸ್ವಾಗತಿಸಿದರು. ಡಾ.ಸುರೇಶ ನಂದಗಾಂವ ನಿರೂಪಿಸಿದರು. ಡಾ. ಶಿವರಾಜ ಶಾಸ್ತ್ರಿ ಹೇರೂರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !