‘ಕ್ಯಾನ್ಸರ್; ಮುಂಜಾಗ್ರತೆಯೇ ಮದ್ದು’

7

‘ಕ್ಯಾನ್ಸರ್; ಮುಂಜಾಗ್ರತೆಯೇ ಮದ್ದು’

Published:
Updated:
Prajavani

ಕಲಬುರ್ಗಿ: ‘ಕ್ಯಾನ್ಸರ್ ಮಾರಕ ಕಾಯಿಲೆಯಾಗಿದೆ. ಮುಂಜಾಗ್ರತಾ ಕ್ರಮವೇ ಅದಕ್ಕೆ ಮದ್ದಾಗಿದೆ’ ಎಂದು ನಗರದ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ.ಶಾಂತಲಿಂಗ ನಿಗ್ಗುಡಗಿ ಹೇಳಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಕ್ಯಾನ್ಸರ್ ರೋಗದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಕ್ಯಾನ್ಸರ್ ಕುರಿತು ಸರಿಯಾದ ಅರಿವು ಇಲ್ಲದಿರುವುದು ಕೂಡ ಸಾವಿಗೆ ಕಾರಣವಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ರೋಗ ತಡೆಗಟ್ಟಬಹುದು. ಧೂಮಪಾನ, ಮದ್ಯಪಾನ, ಸರಿಯಾದ ಆಹಾರ ಪದ್ಧತಿ ಇಲ್ಲದಿರುವುದು, ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಮತ್ತು ಅನುವಂಶೀಯತೆಯಿಂದ ಸಹ ಕ್ಯಾನ್ಸರ್ ಬರುವ ಸಾಧ್ಯತೆ ಇದೆ’ ಎಂದರು.

ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ‘ವಿದ್ಯಾರ್ಥಿನಿಯರು ಆಹಾರ ಪದ್ಧತಿಯನ್ನು ಸರಿಯಾಗಿ ರೂಢಿಸಿಕೊಳ್ಳಬೇಕು. ಹಣ್ಣು , ತರಕಾರಿಗಳನ್ನು ಹಿತಮಿತವಾಗಿ ಸೇವಿಸಬೇಕು. ಪ್ರತಿದಿನ ಯೋಗಾಭ್ಯಾಸ ಮಾಡಬೇಕು. ರೋಗದ ಯಾವುದೇ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಹೇಳಿದರು.

ಪ್ರೊ.ಶಾಂತಲಾ ನಿಷ್ಠಿ ಪ್ರೊ.ಸಾವಿತ್ರಿ ಜಂಬಲದಿನ್ನಿ, ಪ್ರೊ.ಎನ್.ಎಸ್.ಹೂಗಾರ, ಪ್ರೊ.ರೇವಯ್ಯ ವಸ್ತ್ರದಮಠ, ಪ್ರೊ.ಜಾನಕಿ ಹೊಸೂರ, ಡಾ.ಸೀಮಾ ಪಾಟೀಲ, ಕೃಪಾಸಾಗರ ಗೊಬ್ಬೂರ ಇದ್ದರು.

ಡಾ.ಇಂದಿರಾ ಶೇಟಕಾರ ಸ್ವಾಗತಿಸಿ, ನಿರೂಪಿಸಿದರು. ಡಾ.ಸಿದ್ದಮ್ಮ ಗುಡೇದ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !