ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಘವೇಂದ್ರ ಸ್ವಾಮಿಗಳ ಆರಾಧನೆ ಸಂಪನ್ನ

ರಜತ ರಥೊತ್ಸವ, ಪ್ರವಚನ, ಹಾಸ್ಯ ರಸಮಂಜರಿ ಕಾರ್ಯಕ್ರಮ
Published 23 ಆಗಸ್ಟ್ 2024, 6:49 IST
Last Updated 23 ಆಗಸ್ಟ್ 2024, 6:49 IST
ಅಕ್ಷರ ಗಾತ್ರ

ಕಲಬುರಗಿ: ರಾಘವೇಂದ್ರ ಸ್ವಾಮಿಗಳ 353ನೇ ಆರಾಧಾನಾ ಮಹೋತ್ಸವ ಗುರುವಾರ ಉತ್ತರಾರಾಧನೆಯೊಂದಿಗೆ ಸಂ‍ಪನ್ನಗೊಂಡಿತು.

ನಗರದ ಬಿದ್ದಾಪುರ ಕಾಲೊನಿಯ ನಂಜನಗೂಡು ರಾಘವೇಂದ್ರಸ್ವಾಮಿಗಳ ಮಠ, ಬ್ರಹ್ಮಪುರದ ಉತ್ತರಾದಿಮಠ, ಎನ್‌ಜಿಒ ಕಾಲೊನಿಯ ರಾಘವೇಂದ್ರ ಸ್ವಾಮಿ ಮಠ, ಜಗತ್‌ ಬಡಾವಣೆಯ ಗೋಮುಖ ರಾಘವೇಂದ್ರ ಸ್ವಾಮಿ ಮಠ, ಪ್ರಶಾಂತ ನಗರದ ರಾಯರ ಮಠದಲ್ಲಿ ಬೆಳಿಗ್ಗೆಯಿಂದ ಪೂಜಾ ಕೈಂಕರ್ಯ ಜರುಗಿದವು.

ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ರಜತ ರಥೊತ್ಸವ, ದಿವಟಿಗೆ ಮಂಗಳಾರತಿ, ಪ್ರವಚನ ಕಾರ್ಯಕ್ರಮ, ಹಾಸ್ಯ ರಸಮಂಜರಿ ಕಾರ್ಯಕ್ರಗಳು ನಡೆಯಿತು.

ಬ್ರಹ್ಮಪುರದ ಉತ್ತರಾದಿ ಮಠದಲ್ಲಿ ಸತ್ಯನಾರಾಯಣ ಪೂಜೆ, ಗ್ರಾಮ ಪ್ರದಕ್ಷಣೆ, ವರ್ಣಸಿಂಧು ನೃತ್ಯ ಕಲಾಕೇಂದ್ರದಿಂದ ಭರತನಾಟ್ಯ, ನೃತ್ಯ ನಿರ್ದೇಶನದ ಅನಂತ ಚಿಂಚನೂರ ಅವರಿಂದ ಶ್ರೀರಾಮ ಸ್ಮರಣಂ ಕಾರ್ಯಕ್ರಮ ನಡೆಯಿತು.

ಜಗತ್ ಬಡಾವಣೆಯಲ್ಲಿರುವ ಗೋಮುಖ ರಾಘವೇಂದ್ರ ಸ್ವಾಮಿಮಠದಲ್ಲಿ ಮಾಧವಾಚಾರ್ಯ ನೆಲೋಗಿ ಅವರಿಂದ ಪ್ರವಚನ, ಸಂಜೆ ಪ್ರಾಣೇಶ ಗಂಗಾವತಿ ಹಾಗೂ ನರಸಿಂಹ ಜೋಶಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಿತು.

ಸಮಿತಿಯ ಅಧ್ಯಕ್ಷ ಅನೀಲ, ಸಂಚಾಲಕ ಪವನ್ ಫಿರೋಜಾಬಾದ್, ಶಶಿಕಾಂತ್ ಸಾಗನೂರ, ನೀಲ್ ಲೋಹಿತ್, ಉಲ್ಲಾಸ್ ಕುಲಕರ್ಣಿ, ದೀಲಿಪ್ ಕುಲಕರ್ಣಿ, ವಿನೋದ್ ದೇಸಾಯಿ, ಪ್ರಮೋದ್ ದೇಸಾಯಿ, ನಾರಾಯಣಾಚಾರ್ ಇತರರು ಭಾಗವಹಿಸಿದ್ದರು.

ಬಿದ್ದಾಪುರ ಕಾಲೊನಿಯ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಹಾರಥೋತ್ಸವ ಜರುಗಿತು. ಆಕಾಶ ಆಚಾರ್ಯರಿಂದ ಪ್ರವಚನ ಕಾರ್ಯಕ್ರಮ ನಡೆಯಿತು. ಈ ವೇಳೆ ಗುರುರಾಜ ಆಚಾರ್ಯ ಕನಕಗಿರಿ, ಸಾಮಾಚಾರ್ಯ ಬೆಣಕಲ್‌, ಹರೀಶ ಆಚಾರ್ಯ, ಗುರುರಾಜ ದೇಸಾಯಿ ಇತರರಿದ್ದರು.

ಎನ್‌ಜಿಒ ಕಾಲೊನಿಯ ರಾಘವೇಂದ್ರಸ್ವಾಮಿ ಮಠದಲ್ಲಿ ತೊಟ್ಟಿಲು ಸೇವೆ, ಭಜನೆ, ಹಂಸಧ್ವನಿ ಕಾಲನಿಕೇತನ ತಂಡದಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT