ಕೆಂಭಾವಿ: ‘ಸಂಸ್ಕಾರ ಮತ್ತು ನೆಮ್ಮದಿಗಾಗಿ ಪುರಾಣ, ಪ್ರವಚನ ಆಲಿಸಬೇಕು’ ಎಂದು ಪುರಾಣಿಕ ಸೂರ್ಯಕಾಂತಯ್ಯ ಶಾಸ್ತ್ರಿ ಹೇಳಿದರು.

ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಗವಂತನ ಒಲುಮೆಗೆ ನಿರ್ಮಲ ಭಕ್ತಿ ಬೇಕು ಹಾಗೂ ಸಂತಸದ ಬದುಕಿಗೆ ಗುರುವಿನ ಮಾರ್ಗದರ್ಶನ ಬೇಕು. ಪುರಾಣವೆಂದರೆ ಜನರನ್ನು ಭಕ್ತಿ ಮಾರ್ಗದಲ್ಲಿ ನಡೆಸುವುದರ ಜತೆಗೆ ಆತನಲ್ಲಿಯ ದುರ್ಗಣಗಳನ್ನು ತೊಡೆದು ಹಾಕುವುದು ಎಂದರು.

ಸೂಗೂರೇಶ್ವರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಶರಣಬಸವೇಶ್ವರ ದಾಸೋಹ ಮಠದ ಪೀಠಾಧಿಪತಿ ಶರಣಪ್ಪ ಶರಣರು ನೇತೃತ್ವವಹಿಸಿದ್ದರು.

ಈ ಸಂದರ್ಭದಲ್ಲಿ ಆನಂದಸ್ವಾಮಿ ಚಾಮನಾಳ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಮುಖಂಡರಾದ ಸಿದ್ದಣ್ಣ ಸಾಹು ಗೂಗಲ್, ವೀರಯ್ಯಸ್ವಾಮಿ ಸ್ಥಾವರಮಠ, ಸದಾಶಿವರೆಡ್ಡಿ ದೇಸಾಯಿ, ಭೋಜಪ್ಪಗೌಡ ಪೊಲೀಸ್ಪಾಟೀಲ, ಶಾಂತನಂದ ದೇಸಾಯಿ, ಗೊಲ್ಲಾಳಪ್ಪ ತಿಪ್ಪಶೆಟ್ಟಿ, ಶಿವಶಂಕರ ತಿಪ್ಪಶೆಟ್ಟಿ, ಹಳ್ಳೆಪ್ಪ ಹವಾಲ್ದಾರ, ರಾಮಣ್ಣ ದೇಶಪಾಂಡೆ, ಪ್ರಕಾಶಬಾಬು ಪೊಲೀಸ್ಪಾಟೀಲ, ರಾಹುಸಾಬ ದೇಸಾಯಿ, ಚನ್ನಾರೆಡ್ಡಿ ದೇಸಾಯಿ, ಗುರಣ್ಣ ಸಾಹು ಚಾಮನಾಳ ಭಾಗವಹಿಸಿದ್ದರು.

ಜಗದೀಶ ಶರಣರು ಪುರಾಣ ವಾಚಿಸಿದರು. ಶ್ರೀಮಂತ ತಿಪ್ಪಶೆಟ್ಟಿ ಸ್ವಾಗತಿಸಿ, ವಂದಿಸಿದರು. ವಿರೇಶಕುಮಾರ ಕೆಂಭಾವಿ, ಸೋಮಶೇಖರ ಮುದನೂರ ಅವರಿಂದ ಸಂಗೀತ ಸೇವೆ ಜರುಗಿತು. ಶಾಂತನಂದ ಲಕ್ಕುಂಡಿ ಪ್ರಸಾದ ಸೇವೆ ಸಲ್ಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-30-1534841581

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.