ಕೆಂಭಾವಿ: ಪಟ್ಟಣದ ಅರ್ಧ ಪ್ರದೇಶದ ವಿವಿಧ ಬಡಾವಣೆಗಳಿಗೆ ನೀರು ಪೂರೈಸುತ್ತಿರುವ ರೇವಣಸಿದ್ಧೇಶ್ವರ ಬಾವಿ ಸಂಪೂರ್ಣ ಕಲುಷಿತಗೊಂಡು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

‘ಪುರಾತನ ಕಾಲದ ಈ ಬಾವಿ ಅನೇಕ ವರ್ಷಗಳಿಂದ ಜನತೆಗೆ ಕುಡಿಯುವ ನೀ ರು ಒದಗಿಸುವ ಮುಖ್ಯ ಸೆಲೆಯಾಗಿದ್ದು, ಕಳೆದ ಹಲವು ತಿಂಗಳಿನಿಂದ ಈ ಬಾವಿ ಪಾಚಿ ತುಂಬಿ ಸುತ್ತಮುತ್ತಲಿನ ಪ್ರದೇಶ ಮಲಿನವಾಗಿದೆ. ಹೀಗಿದ್ದರೂ ಸ್ಥಳಿಯ ಪುರಸಭೆ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ’ ಎಂದು ಬಡಾವಣೆಯ ನಿವಾಸಿ ವೀರೇಶ ಟಕ್ಕಳಿಕಿ ಆರೋಪಿಸಿದ್ದಾರೆ.

ಕೇವಲ ಜನತೆಯ ಮನೆಗಳಿಗೆ ಮಾತ್ರವಲ್ಲದೆ ಹಳೆ ಬಸ್ ನಿಲ್ದಾಣ ಪ್ರದೇಶದ ಹಲವು ಹೋಟೆಲ್ಗಳಿಗೂ ಈ ಬಾವಿಯ ನೀರೆ ಆಸರೆಯಾಗಿದ್ದು ಶುದ್ಧ ಕುಡಿಯುವ ನೀರು ಒದಗಿಸುವ ಈ ಏಕೈಕ ಬಾವಿ ಇದೀಗ ಪಾಚಿ ತುಂಬಿ ಮಲಿನವಾಗುತ್ತಿದ್ದು ಜನತೆ ಇದೇ ನೀರನ್ನು ತಮ್ಮ ಮನೆಗಳಿಗೆ ಹೊತ್ತೊಯ್ಯುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಕೆಲವೆ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ಕೂಡಲೆ ಪುರಸಭೆ ಈ ಬಗ್ಗೆ ಗಮನ ಹರಿಸಿ ಬಾವಿ ಸ್ವಚ್ಚಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಬೇಕೆಂದು ಅಲ್ಲಿನ ಬಡಾವಣೆ ನಿವಾಸಿಗಳ ಆಗ್ರಹವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-30-1195733163

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.