ಸೈದಾಪುರ: ಪಟ್ಟಣದಲ್ಲಿ ಬುಧವಾರ ಪ್ರಾರಂಭಗೊಂಡಿರುವ ಹಿಂದೂ– ಮುಸ್ಲಿಂ ಭಾವೈಕ್ಯಯ ಸೂಫಿ ಸಂತ ಖ್ವಾಜಾ ಬಂದೇನವಾಜ್ ಉರುಸ್ನ ನಿಮಿತ್ತ ನಡೆದ ಗಂಧದ ಮೆರವಣಿಗೆಯಲ್ಲಿ ಅನೇಕರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.

ಬುಧವಾರ ಸಂಜೆ ಸೈದಾಪುರ ಪಟ್ಟಣದಿಂದ ಖ್ವಾಜಾ ಬಂದೇನವಾಜ್ ದರ್ಗಾಕ್ಕೆ ವಿವಿಧ ಸಮುದಾಯದ ಜನರು ಒಗ್ಗೂಡಿ ಧಾರ್ಮಿಕ ಆಚರಣೆ ಹಾಗೂ ವಾದ್ಯಗಳ ಮೂಲಕ ಗಂಧವನ್ನು ತೆಗೆದುಕೊಂಡು ಹೋಗಲಾಯಿತು. ಪಟ್ಟಣದ ಜಾಮೀಯಾ ಮಸೀದಿಯಿಂದ ಹೊರಟ ಗಂಧದ ಮೆರವಣಿಗೆಯು ಬಸವೇಶ್ವರ, ಕನಕ, ಬಾಬು ಜಗಜೀವನರಾಂ ವೃತ್ತದ ಮೂಲಕ ಜನರು ಕಾಲ್ನಡುಗೆಯಲ್ಲಿ ದರ್ಗಾಕ್ಕೆ ಸಾಗಿತು.

ಗುರುವಾರ ನಡೆಯುವ ವಿಜೃಂಭಣೆಯ ಉರುಸ್ಗೆ ಮುಂಬೈ, ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ದೂರದ ನಗರ ಪ್ರದೇಶಗಳಿಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಖ್ವಾಜಾ ಬಂದೇನವಾಜ ದರ್ಗಾಕ್ಕೆ ಆಗಮಿಸಿ ಕೆಲವರು ಉರುಳು ಸೇವೆ ಮೂಲಕ ಇನ್ನು ಕೆಲವರು ಕಾಯಿ ಕರ್ಪೂರ, ಗೋಧಿಹಿಟ್ಟಿನಿಂದ ಮಾಡಿದ ಚಪಾತಿಯಲ್ಲಿ ಬೆಲ್ಲ, ಏಲಕ್ಕಿ, ಕೊಬ್ಬರಿ ಸೇರಿಸಿ ಹದವಾಗಿ ಹಿಸುಕಿ ಮಾಡಿದ ಮಾಲ್ದಿಯನ್ನು ಮನೆಯಲ್ಲಿ ಸಿದ್ಧಪಡಿಸಿಕೊಂಡು ಬಂದು ತಮ್ಮ ಹರಕೆಯನ್ನು ತೀರಿಸುವವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-30-1248338105

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.