ಯಡ್ರಾಮಿ: ತಾಲ್ಲೂಕಿನ ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಕೇಂದ್ರದಲ್ಲಿ 2 ಹುದ್ದೆಗಳಿದ್ದು, 8 ತಿಂಗಳಿಂದ ಅವು ಖಾಲಿಯಿವೆ. ವೈದ್ಯರು ಶಾಸಕರಾಗಿರುವ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ವೈದ್ಯರ ಹುದ್ದೆಗಳು ಖಾಲಿಯಿರುವುದು ಜನರಲ್ಲಿ ಕಳವಳ ಮೂಡಿಸಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಆಲೂರು, ಹಂಗರಗಾ(ಡಿ), ಬೀಳುವಾರ, ಮುತ್ತಕೋಡ, ಇಜೇರಿಗಳಲ್ಲಿ ಉಪ ಕೇಂದ್ರಗಳಿವೆ. ಇದರಲ್ಲಿ ಒಂದು ಕಿರಿಯ ಆರೋಗ್ಯ ಸಹಾಯಕಿ ಹುದ್ದೆ ಖಾಲಿಯಿದೆ. ಇಬ್ಬರು ನರ್ಸ್ ಹಾಗೂ ಮೂರು ಡಿ ಗ್ರೂಪ್ ಹುದ್ದೆಗಳು ಭರ್ತಿಯಿವೆ.

‘ಆರೋಗ್ಯ ಕೇಂದ್ರದಲ್ಲಿ 8 ತಿಂಗಳಿಂದ ವೈದ್ಯರ ಹುದ್ದೆಗಳನ್ನು ನೇಮಕ ಮಾಡಿಲ್ಲ. ಇದರಿಂದಾಗಿ ರೋಗಿಗಳು ಪರದಾಡುತ್ತಿದ್ದಾರೆ. ತುರ್ತು ಪರಿಸ್ಥಿತಿ ಎದುರಾದರೆ ಯಡ್ರಾಮಿ, ಜೇವರ್ಗಿ ಹಾಗೂ ಕಲಬುರಗಿಗೆ ತೆರಳಬೇಕು. ಮಾರ್ಗ ಮಧ್ಯೆ ಏನಾದರೂ ಹೆಚ್ಚು ಕಡಿಮೆಯಾದರೆ, ಯಾರು ಜವಾಬ್ದಾರಿ ತಗೆದುಕೊಳ್ಳುತ್ತಾರೆ. ಅಧಿಕಾರಿಗಳು ಜನರ ಜೀವದೊಂದಿಗೆ ಚಲ್ಲಾಟವಾಡದೆ ಶೀಘ್ರ ವೈದ್ಯರನ್ನು ನೇಮಿಸಬೇಕು’ಎಂದು ರೋಗಿಗಳು, ಶಾಸಕರು ಹಾಗೂ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು 2017-18ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದ್ದರು. ಆದರೆ ಸಾಮಗ್ರಿಗಳ ಕೊರತೆಯಿಂದ ಎರಡೇ ವಾರಗಳಲ್ಲಿ ಕೇಂದ್ರಕ್ಕೆ ಬೀಗ ಹಾಕಲಾಗಿತ್ತು. ಹಿಂದಿನ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ತಮ್ಮ ಅವಧಿಯಲ್ಲಿ ಮಂಜೂರು ಮಾಡಿಸಿದ್ದ ಒಟ್ಟು 6 ಆರೋಗ್ಯ ಕೇಂದ್ರಗಳ ಪೈಕಿ ಇಜೇರಿ ಒಂದಾಗಿದೆ. ಇಜೇರಿ ಹೋಬಳಿ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಗ್ರಾಮಗಳಿವೆ. ಆಸ್ಪತ್ರೆಗೆ ನಿತ್ಯ ನೂರಾರು ರೋಗಿಗಳು ಬರುತ್ತಾರೆ. ಆದರೆ ವೈದ್ಯರಿಲ್ಲದೆ ಬೇಸರ ವ್ಯಕ್ತಪಡಿಸುತ್ತಾರೆ.

ಖುದ್ದು ಶಾಸಕರು ವೈದ್ಯರಾಗಿದ್ದು, ರೋಗಿಗೆ ತಕ್ಷಣಕ್ಕೆ ಚಿಕಿತ್ಸೆ ಸಿಗದಿದ್ದರೆ ಮುಂದಾಗಬಹುದಾದ ನಷ್ಟಗಳ ಕುರಿತು ಪೂರ್ಣ ಅರಿವು ಅವರಿಗಿದೆ. ಇಜೇರಿ ಆಸ್ಪತ್ರೆಗೆ ವೈದ್ಯರ ನೇಮಕ ಮಾಡಬೇಕು ಎಂದು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಇಜೇರಿ ಸುತ್ತಲಿನ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ವೈದ್ಯರನ್ನು ನೇಮಿಸಿ ರೋಗಿಗಳ ಜೀವ ಉಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.